ಮೈಸೂರು: ರೈತ ಮಸೂದೆಯಿಂದ ರೈತರು ಭೂಮಿ ಕಳೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ನವರು ಹಬ್ಬಿಸುತ್ತಿದ್ದಾರೆ ಎಂದು ಶಾಸಕ ರಾಮದಾಸ್ ಟ್ವೀಟ್ ಮಾಡಿದ್ದಾರೆ.
ಆದರೆ, ಯಾವ ರೈತರಿಗೂ ಇದು ತೊಂದರೆಯಾಗುವುದಿಲ್ಲ ಎಂದು ಅವರು ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ನವರು ಸಿಎಎ ಜಾರಿಗೆ ತಂದಾಗ ದೇಶದ ಪೌರತ್ವವನ್ನು ಕಸಿದುಕೊಳ್ಳುತ್ತಾರೆ ಎಂದು ಸುಳ್ಳು ಹಬ್ಬಿಸಿದ್ದರು. ಇಂದಿಗೆ ಸಿಎಎ ಜಾರಿಗೆ ಬಂದು 1 ವರ್ಷ ಓರ್ವ ಭಾರತೀಯ ಪ್ರಜೆಯೂ ಪೌರತ್ವ ಕಳೆದುಕೊಂಡಿಲ್ಲ ಎಂದು ಎಸ್.ಎ.ರಾಮದಾಸ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.