ಖಾಸಗಿ ಬಸ್ ಗಳದ್ದೇ ಕಾರು ಬಾರು

ಮೈಸೂರು, ಡಿ. 12- ತಮ್ಮ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನೌಕರರು ನಡೆಸುತ್ತಿರುವ ಪ್ರತಿಭಟನೆ ಮೈಸೂರಿನಲಿ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಮೈಸೂರು ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಗಳೆರಡೂ ಖಾಲಿ ಖಾಲಿ ಆಗಿದೆ.
ಬಂದ್ ನಡುವೆಯೂ ಬೆಳ್ಳಂಬೆಳಿಗ್ಗೆ ನಿಲ್ದಾಣದ ಮುಂದೆ ಪ್ರಯಾಣಿಕರು ಬಸ್ ಗಾಗಿ ಕಾದು ನಿಂತಿದ್ದು ಕಂಡು ಬಂದಿತು.
ಬಸ್ ಬರಬಹುದೆನ್ನುವ ನಿರೀಕ್ಷೆಯಲ್ಲಿ ಬಸ್ ನಿಲ್ದಾಣದತ್ತ ಪ್ರಯಾಣಿಕರು ಆಗಮಿಸುತ್ತಿದ್ದಾರೆ.
ಮೊದಲ ದಿನ ಕೆಲ ಬಸ್ ಸಂಚರಿಸುತ್ತಿತ್ತು. ಆದರೆ ಎರಡನೆ ದಿನವಾದ ಶನಿವಾರ ಸರಕಾರಿ ಬಸ್ ಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಡಿಪೆÇೀಗಳಿಂದ ಬಸ್ ಗಳು ಹೊರಬಂದೇ ಇಲ್ಲ.
24 ಗಂಟೆ ಕಾರ್ಯನಿರ್ವಹಿಸುತ್ತಿದ್ದ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಒಂದೇ ಒಂದು ಬಸ್ ಕಂಡು ಬರುತ್ತಿಲ್ಲ.
ಮುಷ್ಕರದಿಂದಾಗಿ ಸರ್ಕಾರಿ ಬಸ್ ಗಳನ್ನೇ ನೆಚ್ಚಿಕೊಂಡ ಪ್ರಯಾಣಿಕರು ಖಾಸಗಿ ಬಸ್ ಗಳ ಮೊರೆ ಹೋಗುವಂತಾಗಿದೆ.
ಸರ್ಕಾರಿ ಬಸ್ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ನಿಲ್ದಾಣದ ಬಳಿ ಖಾಸಗಿ ಬಸ್ ಗಳದ್ದೇ ಕಾರು ಬಾರು ನಡೆದಿದೆ.