ಮೈಸೂರು: ಮೈಸೂರಿನಲ್ಲಿ ಬಸ್ ಸಂಚಾರ ಸೋಮವಾರದಿಂದ ಆರಂಭವಾಗಿದೆ.
ಮೈಸೂರು ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಪರಿಸ್ಥಿತಿಯನ್ನು ನಗರ ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವಲೋಕಿಸಿ ಕೇಂದ್ರೀಯ ಬಸ್ ನಿಲ್ದಾಣ ನಿಯಂತ್ರಣಾಧಿಕಾರಿ ಹೇಮಂತ್ ಕುಮಾರ್ ಜೊತೆಗೆ ಸಮಾಲೋಚನೆ ನಡೆಸಿದರು.
ನಾನು ನಿಲ್ದಾಣದಲ್ಲಿ ಸಾರ್ವಜನಿಕರನ್ನು ಮಾತನಾಡಿಸಿದೆ. ಬಹುತೇಕ ಅಂತರ ಜಿಲ್ಲೆ ಪ್ರಯಾಣಿಕರು ಇದ್ದಾರೆ. ನಮ್ಮ ವ್ಯಾಪ್ತಿಯಲ್ಲಿ ಅವರಿಗೆ ನಾವು ಸಂಪೂರ್ಣ ಎಸ್ಕಾರ್ಟ್ ನೀಡುತ್ತೇವೆ. ಸಾರಿಗೆ ಇಲಾಖೆ ಎಷ್ಟು ಬಸ್ ಓಡಿಸುತ್ತೆ ಅಷ್ಟೂ ಬಸ್ ಗೆ ಎಸ್ಕಾರ್ಟ್ ನೀಡುತ್ತೇವೆ. ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು. ಅಗತ್ಯ ಬಿದ್ದರೆ ಇದಕ್ಕಾಗಿ ಹೆಚ್ಚಿನ ಪೆÇಲೀಸರನ್ನು ಬಳಕೆ ಮಾಡಿಕೊಳ್ಳುತ್ತೇವೆ ಎಂದು ಪೆÇಲೀಸ್ ಕಮೀಷನರ್ ಡಾ.ಚಂದ್ರಗುಪ್ತ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಅಂತರಾಜ್ಯ ಬಸ್ ಗಳು ಮಾತ್ರ ಓಡಾಟ ಆರಂಭಿಸಿವೆ.
ತಮಿಳುನಾಡು, ಕೇರಳ ರಾಜ್ಯದ ಬಸ್ ಗಳು ಮಾತ್ರ ಓಡಾಟ ನಡೆಸಿವೆ.
ಬೆಂಗಳೂರು ಕಡೆಗೆ ಕೆಲವು ಬಸ್ ಸಂಚರಿಸಿವೆ.
ಮೈಸೂರಿನಿಂದ ಜಿಲ್ಲಾ ಕೇಂದ್ರಗಳಿಗೂ ಪೆÇಲೀಸ್ ಭದ್ರತೆಯಲ್ಲಿ ಬಸ್ ಸೇವೆ ಆರಂಭವಾಗಿದೆ.
ಮೈಸೂರು ನಗರ ಬಸ್ ನಿಲ್ದಾಣದಿಂದ ಬೆಳಗಿನಿಂದಲೇ ಪೆÇಲೀಸ್ ಬೆಂಗಾವಲಿನಲ್ಲಿ ಬಸ್ ಸಂಚಾರ ಆರಂಭಿಸಲಾಗಿದ್ದು, ರಾಮಕೃಷ್ಣ ನಗರ, ಬೆಮಲ್ ನಗರ ಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಕೆಲವು ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.
ಕೇಂದ್ರಿಯ ಬಸ್ ನಿಲ್ದಾಣ ಸುತ್ತ ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡಲಾಗಿದೆ.