ನೈಋತ್ಯ ರೈಲ್ವೆ ಪಿಂಚಣಿ ಅದಾಲತ್

ಮೈಸೂರು: ನೈಋತ್ಯ ರೈಲ್ವೆ ದೇಶಾದ್ಯಂತ ಮಂಗಳವಾರ ರೈಲ್ವೆ ಮಂಡಳಿಯ ನಿರ್ದೇಶನದಂತೆ ಅಖಿಲ ಭಾರತ ಪಿಂಚಣಿ ಅದಾಲತ್ ಅನ್ನು ನಡೆಸಲಾಯಿತು.
ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ಮೈಸೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ದೇವಸಹಾಯಂ ಅವರು ಪಿಂಚಣಿ ಅದಾಲತ್ ಅಧ್ಯಕ್ಷತೆ ವಹಿಸಿದರು.
ಅದಾಲತ್‍ನಲ್ಲಿ ಒಟ್ಟು 25 ಪಿಂಚಣಿದಾರರು ಹಾಜರಿದ್ದರು.
ಅದಾಲತ್ ದಿನದಂದು ಪ್ರತಿನಿಧಿಸಿದ ಪ್ರಕರಣಗಳು ಸೇರಿದಂತೆ 43 ಪ್ರಕರಣಗಳನ್ನು ಪಿಂಚಣಿದಾರರು ಪ್ರತಿನಿಧಿಸಿದ್ದಾರೆ.
ಈ ಪೈಕಿ 37 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, ಇತರ ಪ್ರಕರಣಗಳನ್ನು ಪರೀಕ್ಷಿಸಿ ಸೂಕ್ತವಾಗಿ ಪರಿಹರಿಸಲಾಗುವುದು ಎಂದು ದೇವಸಹಾಯಂ ರವರು ತಿಳಿಸಿದರು.
ಪಿಂಚಣಿದಾರರ ಸಂಘದ ಮೈಸೂರು ವಿಭಾಗದ ಅಧ್ಯಕ್ಷ ಪಾರ್ಥಸಾರಥಿ ಅವರು ಈ ಸಂದರ್ಭದಲ್ಲಿ ಮಾತನಾಡಿದರು.