ಮೈಸೂರು: ಮೈಸೂರು ಡಿಸಿಯಾಗಿ ಬಿ. ಶರತ್ ಅವರನ್ನು ಮರು ನೇಮಕ ಮಾಡುವಂತೆ ಸಿಎಟಿ ಆದೇಶಿಸಿದೆ.
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ ಶರತ್ ಅವರನ್ನು ಕೇವಲ ಒಂದು ತಿಂಗಳೊಳಗಾಗಿ ರಾಜ್ಯ ಸರಕಾರ ವರ್ಗಾವಣೆ ಮಾಡಿ ರೋಹಿಣಿ ಸಿಂಧೂರಿ ಅವರನ್ನು ಮೈಸೂರು ಜಿಲ್ಲಾಧಿಕಾರಿ ಆಗಿ ನೇಮಕ ಮಾಡಿತ್ತು.
ರೋಹಿಣಿ ಸಿಂಧೂರಿ ಅವರ ನೇಮಕ ಪ್ರಶ್ನಿಸಿ ಶರತ್ ಅವರು ಸಿಎಟಿ ಮೇಟ್ಟಿಲೇರಿದ್ದರು.
ಇದೀಗ ಸಿಎಟಿ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಿದೆ.
ಬಿ ಶರತ್ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ಮರು ನೇಮಕ ಮಾಡುವಂತೆ ಸಿಎಟಿ ಆದೇಶ ನೀಡಿದೆ.
ಇದೇ ಡಿ. 22 ರೊಳಗೆ ಈ ಸಂಬಂಧ ಆದೇಶ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸುವಂತೆ ತಿಳಿಸಲು ಅಡ್ವೊಕೇಟ್ ಜನರಲ್ ಗೆ ನಿರ್ದೇಶನ ನೀಡಿರುವ ನ್ಯಾಯಾಲಯ ತಪ್ಪಿದಲ್ಲಿ ಡಿ. 22ರಂದು ಸಿಎಟಿ ಯೇ ಈ ಬಗ್ಗೆ ಆದೇಶ ಹೊರಡಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಸಿಎಟಿಯ ಈ ಆದೇಶದಿಂದ ರಾಜ್ಯ ಸರ್ಕಾರದ ಆದೇಶಕ್ಕೆ ಹಿನ್ನಡೆ ಆದಂತಾಗಿದೆ.