ಮೈಸೂರು: ನಗರದ ಕುರಿಮಂಡಿಯಲ್ಲಿ ಯುವಕನೊಬ್ಬನ ಕೊಲೆ ಪ್ರಕರಣ ಹಿನ್ನೆಲೆ ನಗರದ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
ಕುರಿಮಂಡಿಯ ವಾಸಿಗಳಾದ ನಿಖಿಲ್ ಪ್ರಸಾದ್ (20), ಅಪ್ಪು (18) ಬಂಧಿತರು.
ಡಿ. 15ರಂದು ಕುರಿಮಂಡಿಯಲ್ಲಿ ರವಿ (27) ಎಂಬಾತನನ್ನು ಬಂಧಿತರು ಕೊಲೆ ಮಾಡಿದ್ದರು. ಕೊಲೆಯಾದ ರವಿಗೂ ಹಣಕಾಸಿನ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಹೀಗಾಗಿ ಬಂಧಿತರು ಕತ್ತು ಹಿಸುಕಿ ರವಿಯನ್ನು ಕೊಲೆ ಮಾಡಿದ್ದರೆಂದು ಪೆÇಲೀಸರು ತಿಳಿಸಿದ್ದಾರೆ.
ಎನ್ ಆರ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.