ಮೈಸೂರು: ಗ್ರಾಹಕರ ಸೋಗಿನಲ್ಲಿ ಆಭರಣದ ಅಂಗಡಿಯೊಂದಕ್ಕೆ ಬಂದು 80 ಗ್ರಾಂ ಚಿನ್ನಾಭರಣವನ್ನು ಅಪಹರಿಸಿ ಪರಾರಿಯಾದ ಘಟನೆ ನಗರದ ಹೆಬ್ಬಾಳಿನ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಹೆಬ್ಬಾಳಿನ ಮುಖ್ಯ ರಸ್ತೆಯಲ್ಲಿರುವ ಕೈಲಾಶ್ ಬ್ಯಾಂಕರ್ಸ್ ಮತ್ತು ಜ್ಯುವೆಲ್ಲರಿ ಮಳಿಗೆಯಲ್ಲಿ ಈ ಕಳವು ನಡೆದಿದೆ.
ಇಬ್ಬರು ಗ್ರಾಹಕರ ಸೋಗಿನಲ್ಲಿ ಆಭರಣ ನೋಡುವಂತೆ ಕೈಲಾಶ್ ಬ್ಯಾಂಕರ್ಸ್ ಮತ್ತು ಜ್ಯುವೆಲ್ಲರಿ ಮಳಿಗೆಯ ಬಂದು ಅಂಗಡಿಯವರ ಗಮನಕ್ಕೆ ಬಾರದಂತೆ 80 ಗ್ರಾಂ ತೂಕದ ಚಿನ್ನಾಭರಣವನ್ನು ಅಪಹರಿಸಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಹೆಬ್ಬಾಳು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.