ಮೈಸೂರು: ಫೇಸ್ ಬುಕ್ ನಲ್ಲಿ ಪರಿಚಯವಾದ ಗೆಳೆಯನೊಂದಿಗೆ ಪರಾರಿಯಾಗಿದ್ದ ಗೃಹಿಣಿ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಪತ್ತೆಯಾಗಿದ್ದಾರೆ.
28 ವರ್ಷದ ಗೃಹಿಣಿ 5 ವರ್ಷದ ಹಿಂದೆ ತನ್ನ ಸಂಬಂಧಿಕರಲ್ಲಿಯೇ ವಿವಾಹವಾಗಿದ್ದರು. ದಂಪತಿಗೆ ಮಕ್ಕಳಿರಲಿಲ್ಲ.
ಫೇಸ್ ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಒಂದು ವಾರದ ಹಿಂದೆ ಬಸವನ ಬಾಗೇವಾಡಿಗೆ ತೆರಳಿದ್ದಾರೆ.
ಈ ವಿಚಾರ ತಿಳಿದಿರದ ಪತಿ ಪೆÇಲೀಸರಿಗೆ ದೂರು ನೀಡಿದ್ದರು.
ಪೆÇಲೀಸರು ಮಹಿಳೆ ಮತ್ತು ಆಕೆಯ ಫೇಸ್ ಬುಕ್ ಗೆಳೆಯನನ್ನು ಠಾಣೆಗೆ ಕರೆತಂದು ವಿಚಾರಣೆ ಕೈಗೊಂಡಿದ್ದಾರೆ.