ಸೈಕಲ್ ಜಾಥಾ; ಒಂದೇ ತುರ್ತು ಕರೆ 112ರ ಕುರಿತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ

ಮೈಸೂರು: ಮೈಸೂರು ನಗರ ಪೆÇಲೀಸ್ ವತಿಯಿಂದ ಅಪರಾಧ ತಡೆ ಮಾಸಾಚರಣೆ-2020ರ ಅಂಗವಾಗಿ ಮತ್ತು ERSS- 112 ದೂರವಾಣಿ ಸಂಖ್ಯೆಯ ಜಾಗೃತಿ ಸಲುವಾಗಿ ಸೈಕಲ್ ಜಾಥಾ ಕಾರ್ಯಕ್ರಮವನ್ನು ಶನಿವಾರ ನಗರದಲ್ಲಿ ಆಯೋಜಿಸಲಾಗಿತ್ತು.
ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಚಾಲನೆ ನೀಡಿದರು.
ಸೈಕಲ್ ಸವಾರರು 5 ತಂಡಗಳಾಗಿ ಮೈಸೂರು ನಗರದ ಎಲ್ಲಾ ಪ್ರದೇಶಗಳಲ್ಲಿ ಅಪರಾಧ ತಡೆ ಜಾಗೃತಿ ಮತ್ತು ದೇಶಾದ್ಯಂತ ಒಂದೇ ತುರ್ತು ಕರೆ ಸಂಖ್ಯೆ 112 (ERSS) ಬಗ್ಗೆ ಕರಪತ್ರ ಹಂಚುವುದರ ಮೂಲಕ ಜನ ಜಾಗೃತಿ ಮೂಡಿಸಿದರು.
ದೇಶಾದ್ಯಂತ ಒಂದೇ ತುರ್ತು ಕರೆ ಸಂಖ್ಯೆ 112ರ ಜಾಗೃತಿಗೆ ಇದೇ ವೇಳೆ ನಗರ ಪೆÇಲೀಸ್ ಆಯುಕ್ತ ಡಾ. ಚಂದ್ರಗುಪ್ತ ಕನ್ನಡದಲ್ಲಿ ಸಹಿ ಮಾಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಡಿಸಿಪಿಗಳಾದ ಡಾ.ಎ.ಎನ್.ಪ್ರಕಾಶ್ ಗೌಡ, ಗೀತ ಪ್ರಸನ್ನ, ಎಸಿಪಿ ಸಂದೇಶ್ ಕುಮಾರ್, ರೆಡ್ ಎಫ್ ಎಂ ಆರ್ ಜೆ ರಶ್ಮಿ, ಗೌತಮ್ ದಾಸ್ ಜನರಲ್ ಮ್ಯಾನೇಜರ್ ಕೊಲಂಬಿಯಾ ಏಷ್ಯಾ, ಡಾ. ಉಪೇಂದ್ರ ಶೆಣೈ ಚೀಪ್ ಆಫ್ ಮೆಡಿಕಲ್ ಸರ್ವೀಸ್ ಕೊಲಂಬಿಯಾ ಏಷ್ಯಾ, ರಾಘವ್ ಸ್ಟೇಶನ್ ಹೆಡ್ ರೆಡ್ ಎಫ್ ಎಂ ಮತ್ತಿತರರು ಉಪಸ್ಥಿತರಿದ್ದರು.