ಕೊರೆವ ಚುಮು ಚುಮು ಚಳಿಯಲ್ಲಿಯೂ ಬಿರುಸಿನ ಮತದಾನ

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾರು ಇಂದು ಮತದಾನ ಮಾಡಲು ಕೊರೆವ ಚುಮು ಚುಮು ಚಳಿಯಲ್ಲಿಯೂ ಬೆಳಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವ ದರಶ್ಯ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಕಂಡು ಬಂದಿದೆ.
ಬೆಳ್ಳಂ ಬೆಳಗಿನಿಂದಲೇ ಬಿರುಸಿನ ಮತದಾನ ಜಿಲ್ಲೆಯ ಹಲವೆಡೆ ನಡೆದಿದೆ.
ಜಿಲ್ಲೆಯ ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆ ತಾಲ್ಲೂಕಿನ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ನಡೆಯುತ್ತಿರುವ ಮತದಾನದ ಪ್ರಕ್ರಿಯೆ ಮುಂಜಾನೆಯಿಂದಲೆ ಬಿರುಸಿನಿಂದ ನಡೆಯುತ್ತಿದೆ.
ಚಾಮರಾಜನಗರದ 43 ಗ್ರಾ.ಪಂಚಾಯ್ತಿಯ 742 ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು ಈಗಾಗಲೇ 49 ಸ್ಥಾನಗಳು ಅವಿರೋದವಾಗಿ ಆಯ್ಕೆಯಾಗಿದೆ. ಉಳಿದಂತೆರ 693 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
1876 ಅಭ್ಯರ್ಥಿಗಳು ಕಣದಲ್ಲಿದ್ದು 240594 ಮತದಾರರು ಭವಿಷ್ಯ ನಿರ್ಧರಿಸಲಿದ್ದಾರೆ.
364 ಮತಗಟ್ಟೆಗಳಿದ್ದು 92 ಸೂಕ್ಷ್ಮ ಮತಗಟ್ಟೆಗಳಾಗಿದೆ.
ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 34 ಗ್ರಾ.ಪಂಚಾಯ್ತಿಯ 499 ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಈಗಾಗಲೇ 49 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದೆ. ಉಳಿದಂತೆ 486 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 1203 ಅಭ್ಯರ್ಥಿಗಳು ಕಣದಲ್ಲಿದ್ದು 160970 ಮತದಾರರು ಭವಿಷ್ಯ ನಿರ್ಧರಿಸಲಿದ್ದಾರೆ.
250 ಮತಗಟ್ಟೆಗಳಿದ್ದು 63 ಸೂಕ್ಷ್ಮ ಮತಗಟ್ಟೆಗಳಾಗಿದೆ.
ಚುನಾವಣಾ ಅಂತಿಮಕಣದಲ್ಲಿ 3079 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಚಾಮರಾಜನಗರದ 401564 ಮತದಾರರು ಸ್ಪರ್ಧಿಗಳ ಹಣೆಬರಹವನ್ನು ಇಂದು ಬರೆಯಲಿದ್ದಾರೆ.
ಯಾವುದೆ ಅಹಿತಕರ ಘಟನೆ ನಡೆಯದಂತೆ ಮತಗಟ್ಟೆಗಳಿಗೆ ಬಿಗಿ ಪೆÇಲೀಸ್ ಬಂದೂಬಸ್ತ್ ನಿಯೋಜಿಸಲಾಗಿದೆ.