ಜಿಲ್ಲಾಧಿಕಾರಿಗಳು ಪೆÇಳ್ಳು ಭರವಸೆ ನೀಡಿದರೆ?

ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ
ಚಾಮರಾಜನಗರ: ಚಾಮರಾಜನಗರ ಜಿಲ್ಲಾಧಿಕಾರಿಗಳು ಚುನಾವಣಾ ಸಿಬ್ಬಂದಿಗೆ ನೀಡಿದ ಭರವಸೆ ಈಡೇರಿಸಿಲ್ಲವಂತೆ.
ಚಾಮರಾಜನಗರ ಜಿಲ್ಲಾಧಿಕಾರಿಗಳಾದ ರವಿ ಅವರು ಚುನಾವಣಾ ಕಾರ್ಯಕ್ಕೆ ನಿಯೋಜನೆ ಆಗುವ ಸಿಬ್ಬಂದಿಗಳಿಗೆ ಹೋಳಿಗೆ ಊಟ ಕೊಡಿಸುತ್ತೇವೆ ಎಂದು ಭರವಸೆ ನೀಡಿದ್ದರಂತೆ.
ಆದರೆ ಚುನಾವಣಾ ದಿನವಾದ ಇಂದು ಚುನಾವಣಾ ಸಿಬ್ಬಂದಿಗಳಿಗೆ ಹೋಳಿಗೆ ಊಟವಿರಲಿ ಕೆಲವೆಡೆ ಇವರು ಘೋಷಣೆ ಮಾಡಿದ ಮೆನು ಊಟವೂ ಇರಲಿಲ್ಲವಂತೆ.
ನಮ್ಮ ವರದಿಗಾರರು ಇಂದು ಜಿಲ್ಲೆಯಲ್ಲಿ ಹಲವು ಮತದಾನ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚುನಾವಣಾ ಅಧಿಕಾರಿ ಮತ್ತು ಸಿಬ್ಬಂದಿ ನಮಗೆ ಮಧ್ಯಾಹ್ನದ ಊಟವೇ ಸರಿಯಾಗಿ ಸಿಕ್ಕಿಲ್ಲವೆಂದು ತಿಳಿಸಿದ್ದಾರೆ.