ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಕುಣಿಗಲ್ ಅಲ್ಲಿ ಕುಡಿದು ಕರ್ತವ್ಯ ನಿರ್ವಹಣೆ ಮಾಡುತ್ತಿರೊ ಬಗ್ಗೆ ವಿಡಿಯೋ ವೈರಲ್ ಆಗುತ್ತಿದೆ. ಇದರಿಂದ ಚಾಮರಾಜನಗರ ಜಿಲ್ಲೆಗೂ ಅಪಮಾನದ ಕೊಂಡಿ ಸೇರಿಕೊಂಡಿದೆ.
ಕೆಎ-10 ನೊಂದಣಿಯ 112 ವಾಹನ ಇದ್ದದ್ದು ಚಾಮರಾಜನಗರದಲ್ಲಿ ಆದರೂ ಸ್ಮಾರ್ಟ್ ಸಿಟಿ ಯೋಜನೆಯನ್ನಾಗಿ ರಾಮನಗರ ಮತ್ತು ತುಮಕೂರು ಮಾಡಿದಾಗ ಚಾಮರಾಜನಗರದಲ್ಲಿದ್ದ ವಾಹನವನ್ನ ಅಲ್ಲಿಗೆ ಕಳುಹಿಸಿಕೊಡಲಾಯಿತು. ದುರಂತವೆಂದರೆ ಕುಡಿದು ಕರ್ತವ್ಯನಿರ್ವಹಣೆ ಮಾಡಿದ ಆರೋಪ ಮೇರೆಗೆ ವಾಹನ ಸಮೇತ ವಿಡಿಯೋ ವೈರಲ್ ಆಗುತ್ತಿದ್ದು ಈ ವಾಹನ ಹಾಗೂ ಅದರಲ್ಲಿರೊ ಆರಕ್ಷಕರು ಚಾಮರಾಜನಗರದವರು ಎಂಬ ವದಂತಿಗಳು ಹರಿದಾಡಲಾರಂಭಿಸಿದೆ. ತುಮಕೂರಿನಲ್ಲಿ ವಾಹನವಿದ್ದು ಅಲ್ಲಿರೊ ಪೆÇಲೀಸರೊ ಕೂಡ ಅದೇ ಜಿಲ್ಲೆಗೆ ಸೇರಿಕೊಂಡಿದ್ದವರಾಗಿದ್ದಾರೆಯೆ ಹೊರತು ಚಾಮರಾಜನಗರದ ಯಾವುದೇ ಪೆÇಲೀಸರು ಅಲ್ಲಿನ ಕರ್ತವ್ಯಕ್ಕೆ ತೆರಳಿಲ್ಲ ಎಂಬುದಷ್ಟೆ ಸತ್ಯ.