ಮೈಸೂರು: ಸಾವಿರಾರು ರೂ. ಹಣ ಪಡೆಯುತ್ತಿದ್ದಾಗ ಪುರಸಭೆ ಮುಖ್ಯಾಧಿಕಾರಿಯನ್ನು ಎಸಿಬಿ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.
ಪುಷ್ಪಲತಾ ಬಂಧಿತ ನರಸೀಪುರ ತಾಲ್ಲೂಕಿನ ಬನ್ನೂರು ಪುರಸಭೆ ಮುಖ್ಯಾಧಿಕಾರಿ.
ಇವರು 25 ಸಾವಿರ ರೂ. ಹಣವನ್ನು ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ಹಣದ ಸಮೇತ ಈಕೆಯನ್ನು ಬಂಧಿಸಿದ್ದಾರೆ.
ಬನ್ನೂರಿನ ಗುತ್ತಿಗೆದಾರೊಬ್ಬರಿಗೆ ಪಟ್ಟಣದ ಕಾಮಗಾರಿ ಸಂಬಂಧ 25 ಸಾವಿರ ಹಣ ಲಂಚವಾಗಿ ನೀಡುವಂತೆ ಪುಷ್ಪಲತಾ ಅವರು ಕೇಳಿದ್ದರು ಎನ್ನಲಾಗಿದೆ.
ಈ ಬಗ್ಗೆ ಗುತ್ತಿಗೆದಾರರು ನೀಡದ ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪುಷ್ಪಲತಾ ಅವರನನ್ನು ದಸ್ತಗಿರಿ ಮಾಡಿದ್ದಾರೆ.
ಎಸಿಬಿ ಎಸ್ಪಿ ಸುಮಂತ್ ಪನೇಕರ್, ಡಿಎಸ್ ಪಿ ಪರಶುರಾಮಪ್ಪ, ಅಧಿಕಾರಿಗಳಾದ ಕೆ. ಕರೀಮ್ ರಾವತರ್, ನಿರಂಜನ್ ಮತ್ತು ಸಿಬ್ಬಂದಿಗಳಾದ ಕುಮಾರ್ ಆರಾಧ್ಯ, ಗುರು ಪ್ರಸಾದ್, ಮಂಜುನಾಥ್, ಯೋಗೀಶ್, ನೇತ್ರಾವತಿ ಅವರುಗಳು ಈ ಕಾರ್ಯಾಚರಣೆಯಲ್ಲು ಬಾಗಿ ಆಗಿದ್ದರು.