ಮೈಸೂರು: ಕೆ ಎಂ ಪ್ರವೀಣ್ ಕುಮಾರ್ ಚಾರಿಟಬಲ್ ಟ್ರಸ್ಟ್ ಹಾಗೂ ಶಾರದಾದೇವಿನಗರ ಹಿತರಕ್ಷಣಾ ವೇದಿಕೆ ವತಿಯಿಂದ ನಗರದ ಶಾರದಾದೇವಿ ನಗರದ ವೃತ್ತದಲ್ಲಿ ರಾಮಕೃಷ್ಣ ಪರಮಹಂಸ ರವರ ಪತ್ನಿ ಶಾರದಾ ಮಾತೆ ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶಾರದಾದೇವಿ ಜಯಂತಿಯನ್ನು ಗುರುವಾರ ಸರಳವಾಗಿ ಆಚರಿಸಲಾಯಿತು.
ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಹಿರಿಯ ಸಮಾಜ ಸೇವಕರಾದ ರಘುರಾಂ ವಾಜಪೇಯಿ, ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಚಿಂತನೆಗಳಿಗೆ ಶಾರದಾ ಮಾತೆ ಅವರು ಪ್ರೇರಣೆ ಎಂದರು.
ಚಾಮುಂಡೇಶ್ವರಿ ಬಿಜೆಪಿ ನಗರ ಮಂಡಲ ಅಧ್ಯಕ್ಷರು ಹಾಗೂ ಶಾರದಾದೇವಿ ನಗರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಿ ಎಂ ರಘು ಮಾತನಾಡಿ, ವಿವೇಕಾನಂದನಗರ, ರಾಮಕೃಷ್ಣನಗರದ ವೃತ್ತಗಳಲ್ಲಿರುವಂತೆ ಶಾರದಾದೇವಿನಗರದಲ್ಲಿಯೂ ಶಾರದಾಮಾತೆಯ ಪ್ರತಿಮೆ ನಿರ್ಮಾಣವಾಗಬೇಕು, ತನ್ಮೂಲಕ ಮೂವರು ಮಹನೀಯರನ್ನು ಕೊಡುಗೆಯನ್ನು ಶಾಶ್ವತವಾಗಿ ನೆನೆಯುವ ಕೆಲಸವಾಗುತ್ತದೆ ಎಂದು ತಿಳಿಸಿದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಮಾತನಾಡಿ, ಇಂದಿನ ಸ್ತ್ರೀಯರು ಕೇವಲ ಬಾಹ್ಯ ಬೆಳವಣಿಗೆಗೆ ಗಮನಕೊಡುತ್ತಿದ್ದು, ಆಂತರಿಕ ಸಂವೇದನೆ ಮತ್ತು ಮೌಲ್ಯ¬ಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರಾಚೀನ ಮತ್ತು ಆಧುನಿಕ ಇವೆರಡಕ್ಕೂ ಆದರ್ಶದಂತಿರುವ ಮಾತೆ ಶಾರದಾ¬ದೇವಿಯವರ ಸಂದೇಶಗಳನ್ನು ಅಳವಡಿಸಿಕೊಂಡಲ್ಲಿ ತಮ್ಮ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಜೀವನದಲ್ಲಿ ಶಾಂತಿ ಆನಂದ ಪಡೆಯಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿಪರಮಪೂಜ್ಯ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಲಕ್ಷ್ಮೀದೇವಿ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಎಂ ಆರ್ ಬಾಲಕೃಷ್ಣ, ಮೈಸೂರು ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಎಚ್ ಎನ್ ಶ್ರೀಧರ್ ಮೂರ್ತಿ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ರಾಕೇಶ್ ಭಟ್, ರಾಕೇಶ್ ಕುಂಚಿಟಿಗ, ಎಸ್ ಎನ್ ರಾಜೇಶ್, ಶಾರದಾದೇವಿ ನಗರದ ಹಿತರಕ್ಷಣಾ ವೇದಿಕೆಯ ಸದಸ್ಯರುಗಳಾದ ಎಚ್. ಈ. ರಾಜಮನಿ, ಕೆ ಎಂ ಪುಟ್ಟಸ್ವಾಮಿ, ಚಿಕ್ಕಣ್ಣ, ವಿನೋದ್, ಶುಭಶ್ರೀ, ಶಶಿಕಾಂತ್, ರಾಜಶೇಖರ್, ಸುಚೀಂದ್ರ, ಚಕ್ರಪಾಣಿ ಹಾಗೂ ಇನ್ನಿತರರು ಹಾಜರಿದ್ದರು.