ಮೈಸೂರು: ಯು.ಕೆ ಯಿಂದ ಮೈಸೂರಿಗೆ 137 ಪ್ರಯಾಣಿಕರು ಹಿಂದಿರುಗಿದ್ದಾರೆ. ಅವರೆಲ್ಲರಿಗೂ ಕೊರೊನಾ ಟೆಸ್ಟ್ ಮಾಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಗುರುವಾರ ಮಾಧ್ಯಮ ಪ್ರತಿನಿಧೀಗಳೊಂದಿಗೆ ಮಾತನಾಡಿ ಈ ಬಗ್ಗೆ ಮಾಹಿತಿ ನೀಡಿದರು.
ಡಿ. 20ರ ವರೆಗೆ 119 ಮಂದಿ ಬ್ರಿಟನ್‍ನಿಂದ ಬಂದಿದ್ದಾರೆ. 21ನೇ ತಾರೀಖು 18 ಜನ ಬಂದಿದ್ದಾರೆ. 9 ಮಂಡ್ಯ, 10 ಕೊಡಗು, 2 ಮಂಗಳೂರಿನವರು ಇದ್ದಾರೆ. ಅವರಿಗೆ ಡಿಸ್ಟ್ರಿಕ್ಟ್ ವಾರ್ಡ್ ರೂಂನಿಂದ ಪೆÇೀನ್ ಮಾಡಲಾಗಿದೆ. ಎಲ್ಲರಿಗೂ ಒಮ್ಮೆ ಟೆಸ್ಟ್ ಆಗಿದೆ. 18 ಜನರಲ್ಲಿ ಯಾರಿಗೂ ಪಾಸಿಟಿವ್ ಬಂದಿಲ್ಲ ಎಂದು ತಿಳಿಸಿದರು.
ಇನ್ನು ನ. 25 ರಿಂದ 119 ಜನ ಬಂದಿದ್ದಾರೆ. ಇದರಲ್ಲಿ ಬಹುತೇಕರಿಗೆ ಕ್ವಾರಂಟೈನ್ ಸಮಯ ಕೂಡ ಮುಗಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮತ್ತೆ ಟೆಸ್ಟ್ ಮಾಡಿಸಲಾಗುತ್ತೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಹೊಸ ವೈರಸ್ ಬಗ್ಗೆ ನಮಗೆ ಹೆಚ್ಚು ಮಾಹಿತಿ ಇಲ್ಲ. ಮಕ್ಕಳಿಗೆ ಹೆಚ್ಚು ಪರಿಣಾಮ ಬೀರಬಹುದು ಅಂತ ಹೇಳುತ್ತಿದ್ದಾರೆ ಎಂದು ಡಿಸಿ ರೋಹಿಣಿ ಸಿಂಧೂರಿ ತಿಳಿಸಿದರು.