ಸಡಗರದಿಂದ ಕ್ರಿಸ್ಮಸ್ ಹಬ್ಬ ಆಚರಿಸಿದ ಕ್ರೈಸ್ತರು

ಮೈಸೂರು, ಡಿ. 25- ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಜಿಲ್ಲೆಯಾದ್ಯಂತ ಆಚರಿಸಲಾಯಿತು.
ಬಿಷಪ್ ಡಾ. ಕೆ. ಎ. ವಿಲಿಯಂ ಅವರು ನಗರದಲ್ಲಿನ ಸೇಂಟ್ ಫಿಲೋಮಿನಾ ಚರ್ಚ್ ನಲ್ಲಿ ನಡೆದ ಪ್ರಾರ್ಥನೆ ಯ ನೇತೃತ್ವ ವಹಿಸಿ, ಗೋದಲಿ ಬಳಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
ಗೋದಲಿಯಲ್ಲಿ ಬಾಲ ಏಸುವಿನ ಮೂರ್ತಿಯನ್ನು ಸ್ಥಾಪಿಸಿ ದೀಪ ಬೆಳಗಿ ಪೂಜಿಸಿ ಬಿಷಪ್ ವಿಲಿಯಂ ಅವರು ಪ್ರಾರ್ಥನೆ ಸಲ್ಲಿಸಿ, ಜೋಗುಳ ಹಾಡುವ ಮೂಲಕ ಆರಾಧಿಸಿದರು.
ಕ್ರೈಸ್ತ ಬಂಆಧವರು ಗುರುವಾರ ರಾತ್ರಿ ಚರ್ಚ್ ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ನಗರದ ವಿವಿಧ ಬಡಾವಣೆಗಳಿಂದ ಆಗಮಿಸಿದ ಕ್ರೈಸ್ತ ಬಾಂಧವರು ಕರೋಲ್ ಗೀತೆಗಳನ್ನು ಹಾಡುವ ಮೂಲಕ ಏಸುವಿನ ಗುಣಗಾನ ಮಾಡಿದರು.
ಶುಕ್ರವಾರ ಮುಂಜಾನೆ 5 ಗಂಟೆಯಿಂದಲೇ ಕ್ರಿಸ್ಮಸ್ ಪೂಜೆ ಆರಂಭವಾಗಿತ್ತು.
ನಗರದಲ್ಲಿರುವ ಚರ್ಚ್ ಗಳನ್ನು ಬಣ್ಣದ ದೀಪಗಳಿಂದ ಅಲಂಕÀರಿಸಲಾಗಿತ್ತು.
ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಕ್ರಿಸ್ಮ ಹಬ್ಬವನ್ನು ಕೊರೊನಾ ಮಾರ್ಗ ಸೂಚಿಯಂತೆ ಆಚರಿಸಲಾಯಿತು.