ಅಟಲ್ ಜೀ ಜನ್ಮದಿನವನ್ನು “ಸುಶಾಸನ ದಿನವಾಗಿ” ಆಚರಣೆ

ಮೈಸೂರು: ಭಾರತೀಯ ಜನತಾ ಪಾರ್ಟಿಯ ಮೈಸೂರು ನಗರದ ಹಿಂದುಳಿದ ವರ್ಗಗಳ ಮೊರ್ಚಾದ ವತಿಯಿಂದ ರೈತದಿನ ಹಾಗೂ ಸೇವಾ ಚಟುವಟಿಕೆಯಾಗಿ “ಸುಶಾಸನ ದಿನ”ವನ್ನು ನರಸಿಂಹ ರಾಜ ಕ್ಷೇತ್ರದ ದಲ್ಲಿರುವ ಬಲಮುರಿ ಗಣಪತಿ ದೇವಾಲಯ ಸ್ವಚತೆ ಮಾಡುವ ಮೂಲಕ ಶುಕ್ರವಾರ ಆಚರಿಸಲಾಯಿತು.
ಹಿಂದುಳಿದ ವರ್ಗಗಳ ಮೊರ್ಚಾ ನಗರ ಅಧ್ಯಕ್ಷ ಜೋಗಿ ಮಂಜುರವರ ತಂಡ ರಾಜಕುಮಾರ್ ರಸ್ತೆಯಲ್ಲಿರುವ ಬಲಮುರಿ ಗಣಪತಿ ದೇವಾಲಯ ಸುತ್ತಮುತ್ತಲಿನ ಗಿಡ ಗಂಟೆ ಗಳನ್ನು ಕಿತ್ತು ಸ್ವಚತೆ ಮಾಡಿದರು.
ನಂತರ ಆ ಭಾಗದ ಪೌರಕಾರ್ಮಿಕರುಗಳನ್ನು ಕರೊನಾ ವಾರಿಯರ್ಸ್‍ಗಳೆಂದು ಪರಿಗಣಿಸಿ ಬಾಲಸುಂದರ್, ಸರೊಜಮ್ಮ, ನಾಗರತ್ನ ಪೌರಕಾರ್ಮಿಕರನ್ನು ಸನ್ಮಾನಿಸಿ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು.
ನಂತರ ಮಾತನಾಡಿದ ನಗರ ಜೋಗಿಮಂಜು, ಅಟಲ್ ಜೀರವರು ಅಜಾತ ಶತ್ರು, ಇವರು ಮತ್ತು ಎಲ್.ಕೆ.ಆಡ್ವಾಣಿ ಯವರ ಸ್ನೇಹ ದೇಶದ ಎಲ್ಲ ಪ್ರಜೆಗಳಿಗೆ ಮಾದರಿ. ಇಂದು ಇವರ 96ನೇ ಹುಟ್ಟು ಹಬ್ಬವನ್ನು ಭಾಜಪ “ರೈತ ದಿನ”” ಹಾಗು”ಸುಹಾಸನ ದಿನಾಚರಣೆ” ಯಾಗಿ ಆಚರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದರು.
ಮೈಸೂರಿನಲ್ಲಿ ಯಾವುದಾದರೂ ಜಾಗದಲ್ಲಿ ಅಟಲ್ ಜೀ ಅವರ ಪ್ರತಿಮೆಯನ್ನು ನಗರಪಾಲಿಕೆ ನಿರ್ಮಾಣ ಮಾಡಬೇಕೆಂದು ಅವರು ತಿಳಿಸಿದರು.
ಈ ಸಂಧರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಸುರೇಶ್ ಬಾಬು, ರಾಜ್ಯ ಸದಸ್ಯ ಉಮೇಶ್ ನಗರ ಪಾಲಿಕೆ ಸದಸ್ಯ ಸಾತ್ವಿಕ್ ಸಂದೇಶ್ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಗೋಪಾಲ್, ಮಣಿರತ್ನಂ, ನರಸಿಂಹರಾಜ ಕ್ಷೇತ್ರದ ಅಧ್ಯಕ್ಷ ನಾಗೇಶ್, ಶಿವರಾಜ್, ಮಹದೇವ್, ಜಗದೀಶ್, ಪ್ರಸಾದ್, ಮಂಜುನಾಥ್, ಹರೀಶ್ ಅಂಕಿತ್, ಸೂರಜ್, ಜೀವನ್, ನಿತಿನ್ ಅರಸ್, ಅಚ್ಚಯ್ಯ, ಮಂಜು ಮುಂತಾದವರು ಇದ್ದರು.