10 ಪಥ ಹೆದ್ದಾರಿ ಕಾಮಗಾರಿಗೆ 7 ಕೆರೆ ಮಣ್ಣು ಬಳಕೆಗೆ ಪ್ರಸತಾಪ್ ಸಿಂಹ ಸೂಚನೆ

ಮೈಸೂರು: ಹತ್ತು ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ರಸ್ತೆಯ ಉಬ್ಬು ತಗ್ಗುಗಳನ್ನು ಸರಿಪಡಿಸಲು ದೊಡ್ಡ ಪ್ರಮಾಣದ ಮಣ್ಣಿನ ರಾಶಿ ಅಗತ್ಯವಿದ್ದು, ಇದಕ್ಕಾಗಿ ಚಾಮುಂಡೇಶ್ವರಿ ಕ್ಷೇತ್ರದ 7 ಕೆರೆಗಳ ಹುಳನ್ನು ಬಳಸಿಕೊಳ್ಳಲು ಅನುಮತಿ ನೀಡುವಂತೆ ತಹಸೀಲ್ದಾರ್ ರಕ್ಷಿತ್ ರವರಿಗೆ ಸಂಸದ ಪ್ರತಾಪ್ ಸಿಂಹರವರು ಸೂಚನೆ ನೀಡಿದರು.
ಮೈನ್ಸ್ ಅಂಡ್ ಜಿಯೋಲಜಿ ಇಲಾಖೆಗೆ ಒಂದು ಕ್ಯೂಬಿಕ್ ಮೀಟರ್ ಗೆ ನಿಗಧಿಪಡಿಸಿರುವ ಸರ್ಕಾರದ ಬೆಳೆಯನ್ನು ಡಿ.ಬಿ.ಎಲ್ ನೀಡುವುದು ಇದರಿಂದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಮಣ್ಣು ಸಿಕ್ಕಿದಂತ್ತಾಗುತದೆ. ಉಚಿತವಾಗಿ ಚಾಮುಂಡೇಶ್ವರಿ ಕ್ಷೇತ್ರದ 7 ಕೆರೆಗಳು ಮಣ್ಣನು ಬಳಸಿಕೊಳ್ಳಲು ಸೂಚಿಸಲಾಯಿತು.
ಸತ್ಯನಾಯಕಹಳ್ಳಿ ಕೆರೆ, ನಾಗವಲಕೆರೆ, ಹುಯಿಳಲುಕೆರೆ, ಬೊಮ್ಮೆನಹಳ್ಳಿಕೆರೆ, ಜೆಟ್ಟಿಹುಂಡಿಕೆರೆ, ಹುಯಿಳಲು ಕಟ್ಟೆ ಹಾಗೂ ಕೆ.ಹೆಮ್ಮನಹಳ್ಳಿ ಕೆರೆ ಮಣ್ಣನ್ನು ಬಳಸಿಕೊಳ್ಳಲಾಗುತ್ತದೆ.
ಈ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಜವಾಬ್ದಾರಿ ಹೊಂದಿರುವ ಡಿ.ಬಿ.ಎಲ್.ನ ಪ್ರತಿನಿಧಿ ಬನುಪ್ರಕಾಶ್ ಅವರು ಉಪಸ್ಥಿತರಿದ್ದರು.