ರೈಲು ವಸ್ತುಸಂಗ್ರಹಾಲಯದಲ್ಲಿ ಹೊಸ ಆಕರ್ಷಣೆ ಅನಾವರಣಗೊಳಿಸಿದ ಸುಜಾತಾ ಸಿಂಗ್

ಮೈಸೂರು: ಮೈಸೂರು ರೈಲು ವಸ್ತುಸಂಗ್ರಹಾಲಯದಲ್ಲಿ ಹೊಸ ಆಕರ್ಷಣೆಗಳನ್ನು ಶನಿವಾರ ಅನಾವರಣಗೊಳಿಸಲಾಯಿತು.
ಭಾರತೀಯ ರೈಲ್ವೆ ಸಂರಕ್ಷಣಾ ಪಡೆ ಸೇವೆಗಳ ಸದಸ್ಯ ಮತ್ತು ಸಹಾಯಕ್ ರ ಪ್ರತಿಮೆಗಳ ಅನಾವರಣ ಮತ್ತು ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯ್ ಕುಮಾರ್ ಸಿಂಗ್ ರವರಿಂದ ಮೈಸೂರು ಹಾಗು ಚಾಮರಾಜಪುರಂ ರೈಲ್ವೆ ನಿಲ್ದಾಣಗಳ ಪರಿಶೀಲನೆ ನಡೆಸಿದರು.
ಹುಬ್ಬಳ್ಳಿಯ ನೈಋತ್ಯ ವಲಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯ ವಲಯ ಅಧ್ಯಕ್ಷರಾದ ಸುಜಾತಾ ಸಿಂಗ್ ರವರು, ಭಾರತೀಯ ರೈಲ್ವೆಯಲ್ಲಿ ಅತ್ಯಂತ ಹೇರಳವಾಗಿ ಕಾಣಸಿಗುವ ಇಬ್ಬರು ರೈಲ್ವೆ ಸಂರಕ್ಷಣಾ ಪಡೆ ಸೇವೆಗಳ ಸದಸ್ಯ (ಈ ಹಿಂದೆ ಆರ್.ಪಿ.ಎಫ್.) ಮತ್ತು ಸಹಯಾಕ್ (ಈ ಮೊದಲು ಪೆÇೀರ್ಟರ್ ಎಂದು ಕರೆಯಲಾಗುತ್ತಿತ್ತು) ಇವರ ಜೀವ ಗಾತ್ರ (ಸಹಜ ಪ್ರಮಾಣ)ದ ಪ್ರತಿಮೆಗಳನ್ನು ಮೈಸೂರು ರೈಲ್ವೆ ಸಂಗ್ರಹಾಲಯದಲ್ಲಿ ಅನಾವರಣಗೊಳಿಸಿದರು.
ರೈಲ್ವೆ ಸಂಗ್ರಹಾಲಯದಲ್ಲಿನ ಈ ಹೊಸ ಆಕರ್ಷಣೆಗಳು ಸಂದರ್ಶಕರಿಗೆ ಈ ಎರಡು ವಿಭಿನ್ನ ಜನರ ಗುಂಪುಗಳು ಬಹಳಷ್ಟು ವರ್ಷಗಳಿಂದ ರೈಲ್ವೆಗೆ ಹೇಗೆ ಗಮನಾರ್ಹವಾಗಿ ಸಹಾಯ ಮಾಡುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ. ಮೈಸೂರಿನ ಮಹಿಳಾ ಕಲ್ಯಾಣ ಸಂಸ್ಥೆಯ ವಿಭಾಗದ ಅಧ್ಯಕ್ಷರಾದ ಕಲಿಕ ಅಗರ್‍ವಾಲ್ ಮತ್ತು ಇತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದಕ್ಕಿಂತ ಮೊದಲು, ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಜೊತೆಯಲ್ಲಿ ಹುಬ್ಬಳ್ಳಿಯ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಎ.ಕೆ.ಸಿಂಗ್ ರವರು ಚಾಮರಾಜಪುರಂ ರೈಲ್ವೆ ನಿಲ್ದಾಣವನ್ನು ಪರಿಶೀಲಿಸಿದರು. ಭೇಟಿಯ ಸಂದರ್ಭದಲ್ಲಿ ರೈಲು-ಬಳಕೆದಾರರ ಅನುಕೂಲಕ್ಕಾಗಿ ನಿಲ್ದಾಣದಲ್ಲಿ ಸ್ಥಾಪಿಸಲಾದ ಗಣಕೀಕೃತ ಪ್ರಯಾಣಿಕರ ಕಾಯ್ದಿರಿಸುವ ಟಿಕೆಟ್ ವ್ಯವಸ್ಥೆಯನ್ನು (ಪಿ.ಆರ್.ಎಸ್.) ನಿಯೋಜಿಸಲಾಯಿತು.
ಚಾಮರಾಜಪುರಂ ರೈಲ್ವೆ ನಿಲ್ದಾಣದ ಪ್ರಯಾಣಿಕರ ಕಾಯ್ದಿರಿಸುವ ಟಿಕೆಟ್ ವ್ಯವಸ್ಥೆಯು ವಾರದ ದಿನಗಳಲ್ಲಿ (ಭಾನುವಾರ ಹೊರತುಪಡಿಸಿ) 10 ಗಂಟೆಯಿಂದ 12 ಗಂಟೆಯವರೆಗೆ ಮತ್ತು 15 ಗಂಟೆಯಿಂದ 18 ಗಂಟೆಯವರೆಗೆ ಹಾಗು ಭಾನುವಾರ ಬೆಳಗ್ಗೆ 10 ಗಂಟೆಯಿಂದ 12 ಗಂಟೆವರಗೆ ಕಾರ್ಯನಿರ್ವಹಿಸುತ್ತದೆ.
ಮೈಸೂರಿನಿಂದ ಪ್ರಯಾಣಿಕರ ಸೇವೆಗಳನ್ನು ಕ್ರಮೇಣ ಪುನರಾರಂಭಿಸಿದ ನಂತರ ಎ.ಕೆ.ಸಿಂಗ್ ರವರು ಮೈಸೂರು ರೈಲ್ವೆ ನಿಲ್ದಾಣ ಮತ್ತು ಪಿಟ್ ಲೈನ್ ಗಳನ್ನು ಪರಿಶೀಲಿಸಿದರು. ಪರಶೀಲನೆ ವೇಳೆ ಮೈಸೂರು ವಿಭಾಗದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.