ಗಂಧದ ಮರ ಕಳುವು

ಮೈಸೂರು: ನಗರದಲ್ಲಿನ ವೃತ್ತವೊಂದರಲ್ಲಿ ಬೆಳೆಸಲಾಗಿದ್ದ ಗಂಧದ ಮರವನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ.
ಸಿದ್ದಾರ್ಥ ನಗರ ಸಮೀಪದ ಭಗವಾನ್ ಬುದ್ಧ ವೃತ್ತದ ಮಧ್ಯದಲ್ಲಿ ಬೆಳೆದು ನಿಂತಿದ್ದ ಗಂಧದ ಮರವನ್ನು ದುಷ್ಕರ್ಮಿಗಳು ಕತ್ತರಿಸಿ, ರೆಂಬೆಗಳನ್ನು ಅಲ್ಲಿಯೇ ಬಿಟ್ಟು ಮರದ ಬುಡವನ್ನು ಅಪಹರಿಸಿಕೊಂಡು ಹೋಗಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿ ಮರಗಳ್ಳರು ಅಲ್ಲಿಯೇ ಬಿಟ್ಟಿದ್ದ ಗಂಧದ ರೆಂಬೆಗಳನ್ನು ವಶಕ್ಕೆ ಪಡೆದಿದ್ದಾರೆ.