ಮೈಸೂರು: ಮನೆಯ ಬೀಗ ಮುರಿದು ಕಳ್ಳರು ನಗ-ನಾಣ್ಯ ದೋಚಿಕೊಂಡು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ.
ವಿಜಯನಗರದ 2ನೇ ಹಂತದ ವಾಸಿ ರವಿಪ್ರಕಾಶ್ ಎಂಬುವರ ಮನೆಯಲ್ಲಿ ಈ ಕಳ್ಳತನ ನಡದಿದೆ.
ಕಳ್ಳರು ರವಿಪ್ರಕಾಶ್ ಅವರ ಮನೆಯಲ್ಲಿದ್ದ 4.50. ಲಕ್ಷರೂ ಮೌಲ್ಯದ 150 ಗ್ರಾಂ ಚಿನ್ನಾಭರಣ, 20 ಸಾವಿರ ರೂ.ನಗದು ಅಪಹರಿಸಿಕೊಂಡು ಹೋಗಿದ್ದಾರೆ.
ರವಿಪ್ರಕಾಶ್ ಡಿ. 25ರಂದು ಮನೆಗೆ ಬೀಗ ಹಾಕಿ ಮಂತ್ರಾಲಯಕ್ಕೆ ತೆರಳಿದ್ದರು. ಭಾನುವಾರ ಮನೆಗೆ ವಾಪಸ್ ಆದಾಗ ಕಳವು ನಡೆದಿರುವುದು ಕಂಡು ಬಂದಿದೆ.
ವಿಜಯನಗರ ಪೆÇಲೀಸ್ ಠಾಣೆ ಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.