ಗಾಯಗೊಂಡಿದ್ದ ಚಿರತೆ ಮೈಸೂರು ಮೃಗಾಲಯಕ್ಕೆ

ಮೈಸೂರು: ವಾಹನ ಡಿಕ್ಕಿ ಹೊಡೆದು ಚಿರತೆಯೊಂದು ಗಾಯಗೊಂಡಿರುವ ಘಟನೆ ಮೈಸೂರಿನ ಚಾಮುಂಡಿ ಬೆಟ್ಟದ ದೇವಿ ಕೆರೆ ಸಮೀಪ ನಡೆದಿದೆ.
ಭಾನುವಾರ ರಾತ್ರಿ ಯಾವುದೋ ವಾಹನ ಚಿರತೆಗೆ ಡಿಕ್ಕಿ ಹೊಡೆದಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿಗಳು ತಿಳಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಅದನ್ನು ಮೈಸೂರಿನ ಮೃಗಾಲಯಕ್ಕೆ ರವಾನಿಸಿದರು.
ಸ್ಥಳಕ್ಕೆ ವನ್ಯಜೀವಿಗಳ ವೈದ್ಯರಾದ ಡಾ. ನಾಗರಾಜ್ , ಆರ್.ಎಫ್.ಒ ವಸಂತ್ ಕುಮಾರ್, ಅಕ್ರಂಪಾಷಾ, ಸತೀಶ್ ಮತ್ತಿತರರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.