ಮೈಸೂರು: ದಿವಂಗತ ತಗಡೂರು ರಾಮಚಂದ್ರ ರಾವ್ ಅವರ 31ನೇ ಪುಣ್ಯಸ್ಮರಣೆಯ ಅಂಗವಾಗಿ ನಗರದ ಚಾಮುಂಡಿಪುರಂನಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನದಲ್ಲಿನ ಅವರ ಪ್ರತಿಮೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ ರಾಜೀವ್ ಮಾಲಾರ್ಪಣೆ ಮಾಡಿ ಸ್ವಾತಂತ್ರ ಹೋರಾಟದಲ್ಲಿ ಮೈಸೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಹೆಚ್.ವಿ ರಾಜೀವ್ ಅವರು, ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ಚಳವಳಿಯನ್ನು ದೇಶಾದ್ಯಂತ ತೀವ್ರಗೊಳಿಸಿದ್ದ ಸಂದರ್ಭದಲ್ಲಿ ಕರ್ನಾಟಕದ ಗಾಂಧಿ ಎಂದೇ ಪ್ರಖ್ಯಾತರಾಗಿದ್ದ ತಗಡೂರು ರಾಮಚಂದ್ರರಾವ್ ಅವರು ಪ್ರಮುಖರು ಎಂದರು.
ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ. ಪ್ರಕಾಶ್ ರವರು ಮಾತನಾಡಿ, ತಗಡೂರು ರಾಮಚಂದ್ರರಾಯರ ಸ್ವಾತಂತ್ರ್ಯ ಹೋರಾಟಕ್ಕಾಗಿ ಸಲ್ಲಿಸಿದ ಸೇವೆ ಪರಿಗಣಿಸಿ ಯುವಪೀಳಿಗೆಗೆ ಮಾದರಿಯಾಗುವ ಕಾರ್ಯಕ್ರಮವನ್ನು ಸರ್ಕಾರ ಆಯೋಜಿಸಬೇಕು ಎಂದು ಹೇಳಿದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮೂಗೂರು ಕರ್ನಾಟಕ ಬ್ರಾಹ್ಮಣ ಸಂಘದ ಅಧ್ಯಕ್ಷ ವಿಶ್ವನಾಥಯ್ಯ ರವರು ಮಾತನಾಡಿ, ಸ್ವತಂತ್ರಪೂರ್ವ ರಾಮಚಂದ್ರರಾಯರ ಹೋರಾಟ ಅಪಾರ ಅವರನ್ನು ಸ್ಮರಿಸುವ ದಿನವನ್ನಾಗಿ ಸರ್ಕಾರ ಆಚರಿಸಬೇಕಿದೆ ಎಂದರು.
ಬ್ರಾಹ್ಮಣ ಸಂಘದ ಗ್ರಾಮಾಂತರ ಅಧ್ಯಕ್ಷರಾದ ಗೋಪಾಲ್ ರಾವ್, ನಗರಪಾಲಿಕೆ ಸದಸ್ಯ ಮಾವಿ. ರಾಂಪ್ರಸಾದ್, ಗೋಪಿನಾಥ್, ಹೊಮ್ಮ ಮಂಜುನಾಥ್, ಎಂ.ಡಿ ಪಾರ್ಥಸಾರಥಿ, ಅಪೂರ್ವ ಸುರೇಶ್, ಬ್ರಾಹ್ಮಣ ಯುವ ವೇದಿಕೆಯ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಹೆಚ್.ವಿ ಭಾಸ್ಕರ್, ವಿನಯ್ ಕಣಗಾಲ್, ರಂಗನಾಥ್, ಜಯಸಿಂಹ, ಶ್ರೀನಿವಾಸ್ ಪ್ರಸಾದ್, ಚಕ್ರಪಾಣಿ, ನಾಗಶಯನ ಮುಂತಾದವರು ಇದ್ದರು.