ಮನುಷ್ಯತ್ವದ ಶ್ರೇಷ್ಠ ಸಂದೇಶ ಸಾರಿದ ಚೇತನ ಕುವೆಂಪು -ಆರ್. ರಘು

ಮೈಸೂರು: ಮನುಷ್ಯತ್ವದ ಶ್ರೇಷ್ಠ ಸಂದೇಶ ಸಾರಿದ ಮಹಾನ್ ಚೇತನ ಕುವೆಂಪುರವರು ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಆರ್. ರಘು ಕೌಟಿಲ್ಯ ತಿಳಿಸಿದರು.
ನಗರದ ಗನ್ ಹೌಸ್ ವೃತ್ತದಲ್ಲಿರುವ ಕುವೆಂಪು ಉದ್ಯಾನವನದಲ್ಲಿ ಕರ್ನಾಟಕ ಸೇನಾ ಪಡೆ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ರಾಷ್ಟ್ರಕವಿ ಕುವೆಂಪುರವರ ಜಯಂತಿ ಕಾರ್ಯಕ್ರಮವನ್ನು ಆರ್. ರಘು ಕೌಟಿಲ್ಯರವರು ಉದ್ಘಾಟಿಸಿ ಮಾತನಾಡಿದರು.
ಮಹಾನ್ ರಸಋಷಿ ಕವಿ ಯಾರಾದರೂ ಇದ್ದರೆ ಅದು ಕುವೆಂಪು ಒಬ್ಬರೇ ಎಂದರು.
ಕಾಂಗ್ರೆಸ್ ಯುವ ಮುಖಂಡ ಎನ್.ಎಂ. ನವೀನ್ ಕುಮಾರ್ ಮಾತನಾಡಿ, ಕುವೆಂಪುರವರ ಕೊಡುಗೆ ಸಮಾಜಕ್ಕೆ ಅಪಾರ. ಅವರ ಆದರ್ಶಗಳನ್ನ ನಾವು ಪಾಲಿಸಿದರೇ ಮೌಲ್ಯಯುತ ದಾರಿಯಲ್ಲಿ ಜೀವನ ಸಾಗಿಸಬಹುದು ಎಂದು ಹೇಳಿದರು.
ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಅವರು ಮಾತನಾಡಿ, ರಾಷ್ಟ್ರಕವಿ ಕುವೆಂಪುರವರು ಕನ್ನಡಕ್ಕಾಗಿ ಅಗಾಧ ಸೇವೆ ಸಲ್ಲಿಸಿದ್ದಾರೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಹಿರಿಯ ಸಮಾಜ ಸೇವಕ ಡಾ. ರಘುರಾಂ P.É ವಾಜಪೇಯಿ, ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್, ನಗರಪಾಲಿಕೆ ಸದಸ್ಯ ಬಿವಿ ಮಂಜುನಾಥ್, ಸಾಹಿತಿ ಬನ್ನೂರು ಕೆ ರಾಜು, ವಿಕ್ರಮ್ ಅಯ್ಯಂಗಾರ್, ಡಾ. ಪಿ ಶಾಂತರಾಜೇಅರಸ್, ಅಜಯ್ ಶಾಸ್ತ್ರಿ, ಕುಮಾರ್ ಗೌಡ, ರಾಜೇಶ್, ಪ್ರಭುಶಂಕರ್ ಎಂ ಬಿ, ಡಾ. ಪುಷ್ಪ ಶಂಭುಕುಮಾರ್, ಡಾ. ಮೊಗಣ್ಣಾಚಾರ್, ಪರಿಸರ ಚಂದ್ರು, ಬಂಗಾರಪ್ಪ, ವಿಜಯದೇವರಾಜೇ ಅರಸ್, ಗೊರೂರು ಮಲ್ಲೇಶ್, ಸೋಮಶೇಖರ್, ಸ್ವಾಮಿ, ನಂಜುಂಡಸ್ವಾಮಿ, ನಾಜೀರ್, ಶಾಂತಮೂರ್ತಿ ಆರ್, ಬಸವರಾಜು, ಗುರುಮಲ್ಲಪ್ಪ ಅವರುಗಳಿದ್ದರು.