ಮೈಸೂರು: ಚಿಕ್ಕಬಳ್ಳಾಪುರದ ಪತ್ರಕರ್ತ ಎಲ್. ಅಶ್ವಥನಾರಾಯಣ ಆತ್ಮಹತ್ಯೆ ಯತ್ನಕ್ಕೆ ಸಚಿವ ಡಾ. ಕೆ ಸುಧಾಕರ್ ನೇರ ಕಾರಣರಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ಧಿಗೋಷ್ಠಿ ನಡೆಸಿ ಲಕ್ಷ್ಮಣ್ ಮಾತನಾಡಿದರು.
ಆತ್ಮಹತ್ಯೆಗೆ ಯತ್ನಿಸಿರುವ ಅಶ್ವಥನಾರಾಯಣ ಅವರೇ ಬರೆದಿರುವ ಪತ್ರದಲ್ಲೂ ಸಚಿವ ಸುಧಾಕರ್ ಕಾರಣ ಎಂದು ಹೇಳಿದ್ದಾರೆ. ಪತ್ರಕರ್ತರ ಸ್ಥಿತಿಯೇ ಈ ರೀತಿ ಆದರೆ ಜನಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು ಎಂದರು.
ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಈ ವಿಚಾರವನ್ನು ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ತನಿಖೆ ಮುಗಿಯುವವರೆಗೂ ಸುಧಾಕರ್ ರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಮದು ಲಕ್ಷ್ಮಣ್ ಒತ್ತಾಯಿಸಿದರು.
ಈ ಸಂಬಂಧ ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯಪಾಲರು ಹಾಗೂ ರಾಜ್ಯ ಡಿಜಿಪಿ ಅವರಿಗೆ ದೂರು ನೀಡುತ್ತೇವೆ ಎಂದು ಅವರು ತಿಳಿಸಿದರು.
ಚಿಕ್ಕಬಳ್ಳಾಪುರದ ಪತ್ರಕರ್ತ ಅಶ್ವಥನಾರಾಯಣರಿಗೆ ಪೆÇಲೀಸ್ ಇಲಾಖೆ ಮೂಲಕ ತೊಂದರೆ ಕೊಡುತ್ತಿದ್ದಾರೆಂದು ಲಕ್ಷ್ಮಣ್ ದೂರಿದರು.
ಕಾಂಗ್ರೆಸ್ ಪಕ್ಷಕ್ಕೆ ಚೂರಿ ಹಾಕಿ ಬಂದವರು ನಿಮಗೆ ಚೂರಿ ಹಾಕೋದು ಬಹಳ ದೂರ ಇಲ್ಲ. ನಿಮ್ಮ ಪಕ್ಷಕ್ಕೆ ಏನದ್ರೂ ತೊಂದರೆಯಾದರೆ ಇವರೇ ಪ್ರಮುಖ ಕಾರಣ. ಯಡಿಯೂರಪ್ಪನವರೆ ಎಚ್ಚರಿಕೆಯಿಂದ ಇರೀ. ಕಾಂಗ್ರೆಸ್ ಪಕ್ಷದ ಬೆನ್ನಿಗೆ ಚೂರಿ ಹಾಕಿದ ಹಾಗೆ ನಿಮ್ಮ ಬೆನ್ನಿಗೂ ಚೂರಿ ಹಾಕುವ ದಿನಗಳು ದೂರ ಇಲ್ಲ ಎಂದರು.