ಮೈಸೂರು: ವಿಶ್ವೇಶತೀರ್ಥ ಶ್ರೀಪಾದರು ಅಪ್ರತಿಮ ಸಂತ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಹೇಳಿದರು.
ಅಪೂರ್ವ ಸ್ನೇಹ ಬಳಗದ ವತಿಯಿಂದ ನಗರದ ಟಿ ಕೆ ಲೇಔಟ್ ನಲ್ಲಿರುವ ಕೃಷ್ಣಧಾಮದಲ್ಲಿ ವಿಶ್ವಸಂತ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ್ವರ ತೀರ್ಥ ಪಾದಂಗಳವರ ಮೊದಲನೆ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮಂಗಳವಾರ ಡಿ ಟಿ ಪ್ರಕಾಶ್ ಉದ್ಘಾಟಿಸಿ ಮಾತನಾಡಿದರು.
ಸರ್ವೆ ಜನ ಸುಖಿನೋ ಭವಂತು ಎಂಬ ಘೋಷವಾಕ್ಯ ದಂತೆ ಎಲ್ಲರಲ್ಲೂ ದೇವರನ್ನು ಕಂಡು ಮಾನವ ಪ್ರೀತಿ ತೋರಿದವರು ವಿಶ್ವೇಶತೀರ್ಥ ಶ್ರೀಪಾದರು ಅಪ್ರತಿಮ ಸಂತ ಎಂದು ಹೇಳಿದರು.
ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ಪೇಜಾವರ ಸ್ವಾಮೀಜಿ ಯಾವುದೇ ಜಾತಿಗೆ ಸೀಮಿತ ಸ್ವಾಮೀಜಿ ಎನಿಸದೇ ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾಗಿದ್ದವರು ಎಂದರು.
ಭಕ್ತರಿಗೆ ಶ್ರೀಗಳ ನೆನಪಿನಲ್ಲಿ ತುಳಸಿ, ಅಮೃತಬಳ್ಳಿ, ಬೆಟ್ಟದ ನೆಲ್ಲಿ, ಅಲೋವೆರಾ, ಕೃಷ್ಣ ತುಳಸಿ ಮುಂತಾದ ಆಯುರ್ವೇದ ಗಿಡಗಳನ್ನು ವಿತರಿಸಲಾಯಿತು.
ಅಪೂರ್ವ ಸ್ನೇಹ ಬಳಗದ ಅಪೂರ್ವ ಸುರೇಶ್, ಶ್ರೀಕೃಷ್ಣ ಟ್ರಸ್ಟ್ ನಿರ್ದೇಶಕ ರಘುರಾಮ್ ರಾವ್, ಪಿಜಿ ಉಪಾಧ್ಯಾಯ, ಹೆಚ್. ಆರ್ ಕೃಷ್ಣಮೂರ್ತಿ, ಯುವ ಮುಖಂಡರಾದ ವಿಕ್ರಮ್ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಹೆಚ್.ವಿ ಭಾಸ್ಕರ್, ಸುಚೀಂದ್ರ, ಅಮೋಘ್ ನಾಗರಾಜ್ ಇನ್ನಿತರರು ಇದ್ದರು.