ಕರ್ನಾಟಕ ರಾಜ್ಯವನ್ನು ಸೈನಿಕ ರಾಜ್ಯ ಮಾಡುವ ಕನಸು ಹೊಂದಿದ್ದೇನೆ -ಸೈನಿಕ ರವಿ

ಮೈಸೂರು: ಕರ್ನಾಟಕ ರಾಜ್ಯವನ್ನು ಸೈನಿಕ ರಾಜ್ಯ ಮಾಡುವ ಕನಸನ್ನು ಹೊಂದಿದ್ದೇನೆ. ಅದನ್ನ ಮಾಡಿಯೇ ತಿರಿಸುತ್ತೇನೆ ಎಂದು ಸೈನಿಕರಾದ ರವಿ ಅವರು ಹೇಳಿದರು.
ನಗರದ ಹೊಯ್ಸಳ ಕರ್ನಾಟಕ ಸಂಘದ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಉಚಿತ ಸೇನಾ ತರಬೇತಿ ಶಿಬಿರದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ರವಿ ಅವರು ಮಾತನಾಡಿದರು.
ನಾನು 21 ವರ್ಷಗಳಿಂದ ದೇಶ ಸೇವೆ ಮಾಡುತ್ತಿದ್ದೇನೆ. ನಾನು ರಜಕ್ಕೆಂದು ಊರಿಗೆ ಬಂದಾಗ ಸೈನ್ಯಕ್ಕೆ ಸೇರುವ ಯುವಕರಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದೇನೆ. ನಾನು ತರಬೇತಿ ನೀಡಿದ ಹಲವರು ಪೆÇೀಲಿಸ್ ಇಲಾಖೆ ಹಾಗೂ ಸೈನ್ಯಕ್ಕೆ ಆಯ್ಕೆಯಾಗಿದ್ದಾರೆಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಹೊಯ್ಸಳ ಕರ್ನಾಟಕ ಸಂಘದ ಸತ್ಯನಾರಾಯಣ ಚಾಲನೆ ನೀಡಿದರು.
ಏರ್ ಫೆÇೀರ್ಸ್ ನಿವೃತ್ತ ಅಧಿಕಾರಿ, ಹೊಯ್ಸಳ ಕರ್ನಾಟಕ ಸಂಘ ಉಪಾಧ್ಯಕ್ಷ ಶಂಕರನಾರಾಯಣ್ ತಮ್ಮ ಸೈನಿಕ ವೃತ್ತಿಯಲ್ಲಿ ಆದ ಕೆಲವೊಂದು ಘಟನೆ ಕುರಿತು ಅನುಭವಗಳನ್ನ ಹಂಚಿಕೊಂಡರು.
ದೇಶ ಸೇವೆಗೆ ಕಳಿಸುವ ತಾಯಿ, ತಂದೆ, ಹೆಂಡತಿಗೆ ಹಾಗೂ ಕುಟುಂಬದವರಿಗೆ ಧನ್ಯವಾದ ತಿಳಿಸಬೇಕು ಎಂದು ತಿಳಿಸಿದರು.
ಸೈನ್ಯಕ್ಕೆ ಸೇರುವ ಅಭಿಲಾಷಿಗಳಿಗೆ ಅಧ್ಯಕ್ಷ ಸತ್ಯನಾರಾಯಣರವರು ಫಿಸಿಕಲ್ ಟ್ರೈನಿಂಗ್ ಪಡೆದ ಎಲ್ಲಾ 40 ಯುವಕರಿಗೆ ಉಚಿತವಾಗಿ ಟ್ರ್ಯಾಕ್ ಸೂಟ್ ಮತ್ತು ಸ್ಮರಣಾರ್ಥ ಮೆಡಲ್ ಗಳನ್ನು ವಿತರಿಸಿದರು.
ಇದೇ ಸಂದರ್ಭದಲ್ಲಿ ನಂತರ ಪತ್ರಕರ್ತರಾದ ಮಹೇಶ್ ನಾಯಕ್, ನಂದಿನಿರವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಜೈ ಹಿಂದ್ ಜೈ ಸೈನಿಕ ರಾಜ್ಯ ಅಕಾಡೆಮಿ, ಕರ್ನಾಟಕ, ಹೊಯ್ಸಳ ಕರ್ನಾಟಕ ಸಂಘದ ವತಿಯಿಂದ ಸೈನ್ಯಕ್ಕೆ ಸೇರುವ ಅಭಿಲಾಷಿಗಳಿಗೆ ಉಚಿತ ಸೇನಾ ತರಬೇತಿ ಶಿಬಿರದ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ನಿರ್ದೇಶಕ ರಂಗನಾಥ ಹಾಗೂ ತರಬೇತಿ ಪಡೆದ ಯುವಕರು ಹಾಜರಿದ್ದರು.