ಪತ್ನಿ ಕೊಲೆ: ಪತಿ ಬಂಧನ

ಮೈಸೂರು: ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಂಜನಗೂಡಿನ ನೇತ್ರಾವತಿ (35) 12 ವರ್ಷಗಳ ಹಿಂದೆ ಮಳವಳ್ಳಿ ತಾಲೂಕಿನ ಹಲಗೂರಿನ ಹರ್ಷ ಅವರನ್ನು ವಿವಾಹವಾಗಿದ್ದರು.
ಈ ದಂಪತಿಗೆ ಹನ್ನೊಂದು ವರ್ಷದ ಪುತ್ರಿ ಇದ್ದಾರೆ.
ನೇತ್ರಾವತಿ ನಗರದ ಗಿರಿದರ್ಶಿನಿ ಬಡಾವಣೆಯಲ್ಲಿ ವಾಸವಿದ್ದು, ಈಕೆಯ ಪತಿ ಹರ್ಷ ಬೆಂಗಳೂರಿನಲ್ಲಿ ನೆಲೆಸಿದ್ದರು.
ಇಲ್ಲಿನ ಗಾರ್ಮೆಂಟ್ಸ್ ಯೊಂದರಲ್ಲಿ ನೇತ್ರಾವತಿ ಕೆಲಸ ಮಾಡುತ್ತಿದ್ದರು.
ಹರ್ಷ ಸದಾ ಸಂಶಯದ ದೃಷ್ಟಿಯಿಂದ ನೇತ್ರಾವತಿಯನ್ನು ನೋಡುತ್ತಿದ್ದರು ಎನ್ನಲಾಗಿದೆ.
ಇದರಿಂದ ಮನೆಯಲ್ಲಿ ಸದಾ ಜಗಳವಾಗುತ್ತಿತ್ತು ಎಂದು ತಿಳಿದು ಬಂದಿದೆ.
ನೇತ್ರಾವತಿ ಧರಿಸಿದ್ದ ಸೀರೆಯಿಂದಲೇ ಆಕೆಯ ಕುತ್ತಿಗೆ ಬಿಗಿದು ಹರ್ಷ ಕೊಲೆ ಮಾಡಿದ್ದಾರೆಂದು ಆರೋಪಿಸಿ ನೇತ್ರಾವತಿ ತಂದೆ ಆಲನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.
ಪೆÇಲೀಸರು ನೇತ್ರಾವತಿಯ ಪತಿ ಹರ್ಷನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.