ಚಿತ್ರನಗರಿ ಮೈಸೂರಿನಲ್ಲಿ ಸ್ಥಾಪನೆ ಪರಿಕಲ್ಪನೆ ನೀಡಿದ್ದೇ ವಿಷ್ಣುವರ್ಧನ -ಹೆಚ್ ವಿ ರಾಜೀವ್

ಮೈಸೂರು: ಚಿತ್ರನಗರಿ ಮೈಸೂರಿನಲ್ಲಿ ಸ್ಥಾಪನೆಯ ಪರಿಕಲ್ಪನೆ ನೀಡಿದ್ದೇ ವಿಷ್ಣುವರ್ಧನರವರು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಎಚ್ ವಿ ರಾಜೀವ್ ಅವರು ತಿಳಿಸಿದರು.
ಕರುಣಾಮಯಿ ವಿಷ್ಣು ಅಭಿಮಾನಿಗಳ ಬಳಗ ಮತ್ತು ವಿಷ್ಣು ಸೇನಾ ಸಮಿತಿ ಹಾಗೂ ಮೈಸೂರಿನ ಗಾಂಧಿವೃತ್ತ ಸಂಘ ವತಿಯಿಂದ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ 11ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಲ್ಲಿರುವ ಡಾ ವಿಷ್ಣುವರ್ಧನ್ ಉದ್ಯಾನವನದಲ್ಲಿ ಬುಧವಾರ ವಿಷ್ಣು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಅವರು ಮಾತನಾಡಿದರು.
ವಿಷ್ಣುವರ್ಧನ್ ಅವರ ಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಜೊತೆಯಲ್ಲೆ ಚಿತ್ರರಂಗದಲ್ಲಿ ಹೊಸ ಆಯಾಮ ಸೃಷ್ಟಿಸುವಲ್ಲಿ ಕಲಾವಿದರಿಗೆ ಮಾದರಿಯಾಗಿತ್ತು ಎಂದು ತಿಳಿಸಿದರು.
ಡಾ.ವಿಷ್ಣುವರ್ಧನ್ ರ ಜಯಂತಿಯನ್ನು ರಾಜ್ಯಸರ್ಕಾರ ಆಚರಿಸಿ ಯುವ ಕಲಾವಿದರ ಪ್ರತಿಭೆಯನ್ನು ಪೆÇ್ರೀತ್ಸಾಹಿಸಬೇಕು ಎಂದು ಹೇಳಿದರು.
ಅನಂತರ ಸಮಾಜ ಸೇವಕರಾದ ಡಿ ಟಿ ಪ್ರಕಾಶ್ ಮಾತನಾಡಿ, ಕನ್ನಡದಲ್ಲಿ ಇತ್ತೀಚೆಗೆ ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ಪ್ರಸ್ತುತ ಪ್ರೇಕ್ಷಕ ಇಷ್ಟಪಟ್ಟು ನೋಡುತ್ತಿರುವ ಸಿನಿಮಾಗಳಾದರೂ ಅಗಣಿತ ಕ್ರೌರ್ಯ, ಹಿಂಸೆ, ಲೈಂಗಿಕ ಅಂಶ. ಇಂತಹ ವಸ್ತು ಹೊಂದಿರುವ ಸಿನಿಮಾಗಳೇ ಹೆಚ್ಚಾಗಿರುತ್ತವೆ. ಸಮಾಜದಲ್ಲಿ ನಡೆಯುತ್ತಿರುವುದನ್ನೇ ತೋರುತ್ತಿದ್ದೇವೆ ಎನ್ನುವ ಸಿನಿಮಾ, ಸಿನಿಮಾದಲ್ಲಿ ಇರುವುದನ್ನೇ ಮಾಡುತ್ತಿದ್ದೇವೆ ಎನ್ನುವ ಸಮಾಜ, ಇಂತಹ ಸ್ಥಿತಿಯಲ್ಲಿ ಎರಡೂ ಕಡೆಯಿಂದ ಆತ್ಮಾವಲೋಕನ ಆಗಬೇಕಾಗಿದೆ ಎಂದು ಮಾರ್ಮಿಕವಾಗಿ ತಿಳಿಸಿದರು.
ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಎಂ ಡಿ ಪಾರ್ಥಸಾರಥಿ ಮಾತನಾಡಿ ಮೈಸೂರು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಡಾ. ವಿಷ್ಣುವರ್ಧನ ಉದ್ಯಾನವನ್ನು ರಾಜ್ಯ ಸರ್ಕಾರ ಮತ್ತು ನಗರಪಾಲಿಕೆ ಅಧಿಕೃತವಾಗಿ ವಿಷ್ಣು ಉದ್ಯಾನವನ ಎಮದು ಘೋಷಿಸಿ ಉದ್ಯಾನವನದಲ್ಲಿ ವಿಷ್ಣುವರ್ಧನರವರ ಪ್ರತಿಮೆ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಮಹಾಪೌರರಾದ ಭೈರಪ್ಪ, ನಗರ ಪಾಲಿಕಾ ಸದಸ್ಯ ಮಾ ವಿ ರಾಮಪ್ರಸಾದ್, ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಎಸ್ ಎನ್ ರಾಜೇಶ್, ಬಸವಣ್ಣ, ಮಂಜು, ಮಹದೇವ್, ಮುಬಾರಕ್, ವಾಲೆ ಕುಮಾರ್, ಅಕ್ರಂ, ಅಸ್ಗರ್, ಬಿ. ಸುರೇಶ್ ಬಾಬು, ಕಡಕೊಳ ಜಗದೀಶ್, ಅಜಯ್ ಶಾಸ್ತ್ರಿ, ಹರೀಶ್ ನಾಯ್ಡು, ನವೀನ್ ಕೆಂಪಿ, ರಂಗನಾಥ್, ಪ್ರಶಾಂತ್ ಭಾರದ್ವಾಜ್ ಇನ್ನಿತರರು ಇದೇ ಸಂದರ್ಭದಲ್ಲಿ ಹಾಜರಿದ್ದರು.