ಮೈಸೂರಲ್ಲಿ ನೀರಿನ ದರ ಪರಿಷ್ಕರಣೆ

ಮೈಸೂರು: ಮೈಸೂರು ಮಹಾನಗರ ಪಾಲಿಕೆಯು ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿರುವ ಗೃಹೇತರ (ನಾನ್ ಡೊಮಸ್ಟಿಕ್), ವಾಣಿಜ್ಯ ಮತ್ತು ಕೈಗಾರಿಕಾ ಬಳಕೆ ನೀರಿನ ದರಗಳನ್ನು ಪರಿಷ್ಕರಿಸಿದ್ದು, 2021 ಜನವರಿ 1ರಿಂದ ಜಾರಿಗೆ ಬರಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೃಹೇತರ(ನಾನ್ ಡೊಮಸ್ಟಿಕ್) ಕುಡಿಯುವ ನೀರಿನ ಬಳಕೆಗೆ ಕನಿಷ್ಠ ದರ 168 ರೂ.ಗಳನ್ನು ನಿಗದಿಪಡಿಸಿದೆ. ಇದಲ್ಲದೆ ಪ್ರತಿ ಸಾವಿರ ಲೀಟರ್ ಗೆ ಹೆಚ್ಚುವರಿಯಾಗಿ ಪ್ರತ್ಯೇಕ ದರ ನಿಗದಿಪಡಿಸಿದೆ. 1 ರಿಂದ 10,000 ಲೀಟರ್ ವರೆಗೆ 16.80ರೂ., 10,001ರಿಂದ 20,000 ಲೀಟರ್ ಗೆ 21.60 ರೂ., 20,001ರಿಂದ 30,000 ಲೀಟರ್ ಗೆ 26.40ರೂ., 30,001ರಿಂದ ಮೇಲ್ಪಟ್ಟು ಲೀಟರ್ ಗೆ 31.20ರೂ.ಗಳನ್ನು ನಿಗಧಿಪಡಿಸಿದೆ.
ವಾಣಿಜ್ಯ ಮತ್ತು ಕೈಗಾರಿಕೆಗಳಲ್ಲಿ ಶುದ್ಧೀಕರಿಸಿದ ನೀರಿನ ಬಳಕೆಗೆ ಕನಿಷ್ಠ ದರ 336 ರೂ.ಗಳನ್ನು ನಿಗದಿಪಡಿಸಿದೆ. ಇದಲ್ಲದೆ ಪ್ರತಿ ಸಾವಿರ ಲೀಟರ್ ಗೆ ಹೆಚ್ಚುವರಿಯಾಗಿ ಪ್ರತ್ಯೇಕ ದರ ನಿಗದಿಪಡಿಸಿದೆ. 1ರಿಂದ 10,000 ಲೀಟರ್ ವರೆಗೆ 33.60ರೂ., 10,001ರಿಂದ 20,000 ಲೀಟರ್ ಗೆ 43.20 ರೂ., 20,001ರಿಂದ 30,000 ಲೀಟರ್ ಗೆ 52.80ರೂ., 30,001ರಿಂದ ಮೇಲ್ಪಟ್ಟು ಲೀಟರ್ ಗೆ 62.40ರೂ.ಗಳನ್ನು ನಿಗಧಿಪಡಿಸಿದೆ.
ವಾಣಿಜ್ಯ ಮತ್ತು ಕೈಗಾರಿಕೆಗಳಲ್ಲಿ ಕಚ್ಚಾ ನೀರಿನ ಬಳಕೆಗೆ 1ರಿಂದ 8,000 ಲೀಟರ್ ವರೆಗೆ 300 ರೂ. ಕನಿಷ್ಠ ದರವÀನ್ನು ನಿಗದಿಪಡಿಸಿದೆ. ಇದಲ್ಲದೆ ಪ್ರತಿ ಸಾವಿರ ಲೀಟರ್ ಗೆ ಹೆಚ್ಚುವರಿಯಾಗಿ ಪ್ರತ್ಯೇಕ ದರ ನಿಗದಿಪಡಿಸಿದೆ. 8,001ರಿಂದ 15,000 ಲೀಟರ್ ಗೆ 30ರೂ., 15,001ರಿಂದ 25,000 ಲೀಟರ್ ಗೆ 40ರೂ., 25,001ರಿಂದ ಮೇಲ್ಪಟ್ಟು ಲೀಟರ್ ಗೆ 50ರೂ.ಗಳನ್ನು ನಿಗಧಿಪಡಿಸಿದೆ.
ಈ ಸಂಬಂಧ ಎಲ್ಲಾ ಸಾರ್ವಜನಿಕರಲ್ಲಿ ನೀರನ್ನು ಮಿತವಾಗಿ ಬಳಸಲು ಮತ್ತು ನೀರಿನ ಬಿಲ್ಲನ್ನು ನಿಗಧಿತ ಅವಧಿಯೊಳಗೆ ಪಾವತಿಸಲು ಕೋರಿದೆ.
ಮೀಟರ್ ದುರಸ್ಥಿಯಲ್ಲಿರುವ ಅಥವಾ ಮೀಟರ್ ಇಲ್ಲದೆ ಇರುವ ಸಂಪರ್ಕಗಳು ತಕ್ಷಣವೇ ಇಲಾಖೆ ಗಮನಕ್ಕೆ ತಂದು ದುರಸ್ಥಿಪಡಿಸಿಕೊಳ್ಳಲು ಅಥವಾ ಹೊಸಮೀಟರ್ ಅಳವಡಿಸಿಕೊಳ್ಳುವಂತೆ ತಿಳಿಸಿದೆ. ಇಲ್ಲವಾದಲ್ಲಿ ಸರ್ಕಾರದ ಆದೇಶದ ರೀತ್ಯ ನಿಗಧಿಪಡಿಸಲಾಗದ ದರಗಳಂತೆ ಶೇ. 25ರಿಂದ ಶೇ. 50ರವರೆಗೆ ಹೆಚ್ಚಾಗಿ ವಿಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.