ದೂರ ಶಿಕ್ಷಣ ನೀಡುವ ಏಕ ಮಾತ್ರ ವಿವಿ ಕೆಎಸ್ ಒಯು -ಪೆÇ್ರ.ಎಸ್.ವಿದ್ಯಾಶಂಕರ್

ಮೈಸೂರು: ಮುಕ್ತ ಹಾಗೂ ದೂರ ಶಿಕ್ಷಣ ಕಾರ್ಯಕ್ರಮ ನಡೆಸುವ ಏಕಮಾತ್ರ ವಿಶ್ವವಿದ್ಯಾಲಯ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವೆಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ ಎಂದು ಕೆಎಸ್‍ಓಯು ಕುಲಪತಿ ಪೆÇ್ರ. ಎಸ್. ವಿದ್ಯಾಶಂಕರ್ ತಿಳಿಸಿದರು.
ನಗರದಲ್ಲಿನ ಕೆಎಸ್‍ಒಯುನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೆಎಸ್‍ಓಯು ಕುಲಪತಿ ಪೆÇ್ರ. ಎಸ್. ವಿದ್ಯಾಶಂಕರ್ ಈ ಕುರಿತು ಮಾಹಿತಿ ನೀಡಿದರು.
ಎಲ್ಲರಿಗೂ ಎಲ್ಲೆಡೆ ಶಿಕ್ಷಣ ಎಂಬುದು ಕೆಎಸ್ ಓಯುನ ಉದ್ದೇಶವಾಗಿದ್ದು ಕೆಎಸ್ ಒಯು ಕನಸು ನನಸಾಗಿದೆ ಎಂದು ಕುಲಪತಿಗಳು ಹೇಳಿದರು.
ಕೆಎಸ್ ಒಯು ಕಾಯ್ದೆಗೆ ತಿದ್ದುಪಡಿ ಮಾಡಿ ಕರ್ನಾಟಕದಲ್ಲಿ ಮುಕ್ತ ಹಾಗೂ ದೂರ ಶಿಕ್ಷಣ ನಡೆಸುವ ಏಕಮಾತ್ರ ವಿಶ್ವವಿದ್ಯಾಲಯವನ್ನಾಗಿ ರಾಜ್ಯ ಸರಕಾರ ಘೋಷಣೆ ಮಾಡಿದೆ ಎಂದವರು ತಿಳಿಸಿದರು.
ಇದಕ್ಕೆ ಕಾರಣವಾದ ರಾಜ್ಯಪಾಲರಾದ ವಜುಭಾಯಿ ವಾಲಾ, ಸಿಎಂ ಯಡಿಯೂರಪ್ಪ ಹಾಗೂ ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರಿಗೆ ಧನ್ಯವಾದಗಳು ಎಂದು ಕುಲಪತಿ ಪೆÇ್ರ. ವಿದ್ಯಾಶಂಕರ್ ತಿಳಿಸಿದರು.
ಕೆಎಸ್ ಓಯು 25 ವರ್ಷಗಳನ್ನು ಪೂರೈಸಿದೆ. ಈ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಮೊದಲು ಅಲುಮ್ನಿ ರಚನೆಗೆ ಚಾಲನೆ ನೀಡಲಾಗಿದೆ. ಹಳೇ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಡಿ ತರಲು ಸಿದ್ಧತೆ ನಡೆದಿದೆ ಎಂದರು.
ವಿದೇಶಗಳಲ್ಲಿರುವಂತೆ ಹಳೇ ವಿದ್ಯಾರ್ಥಿಗಳೇ ವಿಶ್ವವಿದ್ಯಾನಿಲಯ ನಡೆಸುವ ವ್ಯವಸ್ಥೆ ನಮ್ಮಲ್ಲೂ ಜಾರಿಯಾಗಬೇಕು ಎಂಬುದು ನಮ್ಮ ಉದ್ದೇಶ ಎಂದು ಕುಲಪತಿಗಳು ತಿಳಿಸಿದರು.
ಉನ್ನತ ಮಟ್ಟದ ಸಮಿತಿ ರಚನೆ ಮಾಡಿ ಹೊಸ ಕಾರ್ಯಕ್ರಮಗಳನ್ನ ಪರಿಚಯ ಮಾಡಲಾಗುವುದು ಎಂದರು.
ಹೊಸದಾಗಿ 10 ಕೋರ್ಸ್‍ಗಳನ್ನು ಆರಂಭಿಸಲಾಗುವುದೆಂದು ತಿಳಿಸಿದ ಅವರು, ಬಿ.ಎಸ್ಸಿ, ಬಿಬಿಎ, ಬಿಸಿಎ, ಬಿ.ಎಸ್ಸಿ.ಐಟಿ, ಎಂ.ಎಸ್ಸಿ ಐಟಿ, ಎಂಎಸ್ಸಿ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಎಂ.ಎಸ್ಸಿ ಫುಡ್ ಸೈನ್ಸ್ ಮತ್ತು ನ್ಯೂಟ್ರಿಷನ್ ಸೇರಿದಂತೆ 10 ಹೊಸ ಕೋರ್ಸ್‍ಗಳು ಜನವರಿಯಿಂದ ಆರಂಭವಾಗಲಿದೆ. ಇದರೊಂದಿಗೆ ಆನ್ ಲೈನ್ ಮುಖಾಂತರ ಹೊಸದಾಗಿ ಎಂಕಾಂ, ಎಂಬಿಎ, ಎಂಎ, ಎಂಎಸ್ಸಿ ಐಟಿ, ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ಸೇರಿದಂತೆ 8 ಕೋರ್ಸ್ ಆರಂಭಿಸಲಾಗುವುದೆಂದರು.
ಕೆಎಸ್ ಓಯುನಲ್ಲಿ ಪ್ರವೇಶಾತಿ ಪ್ರಕ್ರಿಯೆ ಗಣಕೀಕರಣವಾಗಿದೆ. ಆನ್ಲೈನ್ ತರಗತಿ ನಡೆಸಲು ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದರು.
ಜೈನಹಳ್ಳಿ ಸತ್ಯನಾರಾಯಣ ಗೌಡ ಅವರ ನೇತೃತ್ವದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದ ಕುಲಪತಿಗಳು ಮೊದಲು 200 ರಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ಇದೀಗ ಸಾವಿರ ತಲುಪಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪೆÇ್ರ. ಲಿಂಗರಾಜ ಗಾಂಧಿ ಉಪಸ್ಥಿತರಿದ್ದರು.