ಮೈಸೂರು: ನಗರದ ಐತಿಹಾಸಿಕ ಹಾಗೂ ಪ್ರತಿಷ್ಠಿತ ಲಲಿತ್ ಮಹಲ್ ಹೋಟೆಲ್ ನ ಶತಮಾನೋತ್ಸವ ಆಚರಣೆ ಮಾಡಲಾಗುವುದು ಎಂದು ಜಂಗಲ್ ಲಾಡ್ಜ್ ಗಳು ಮತ್ತು ರೆಸಾರ್ಟ್ಸ್ ಲಿಮಿಟೆಡ್ ಅಧ್ಯಕ್ಷ ಎಂ. ಅಪ್ಪಣ್ಣ ತಿಳಿಸಿದರು.
ಲಲಿತ ಮಹಲ್ ಹೊಟೇಲ್ ನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಅಪ್ಪಣ್ಣ ಅವರು ಮಾತನಾಡಿದರು.
ಲಲಿತ್ ಮಹಲ್ ಹೋಟೆಲ್ ಗೆ 100ರ ಸಂಭ್ರಮ. ಮುಂದಿನ ನವೆಂಬರ್ ತಿಂಗಳಿಗೆ ಶತಮಾನೋತ್ಸವ ಆಚರಣೆ ಮಾಡಲಾಗುತ್ತದೆ ಎಂದು ಅಪ್ಪಣ್ಣ ಹೇಳಿದರು.
ಲಲಿತ ಮಹಲ್ ಹೋಟೆಲ್ ದೇಶದ ಪಾರಂಪರಿಕ ಕಟ್ಟಡಗಳಲ್ಲಿ ಒಂದು. ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿರುವ ಕಟ್ಟಡ ನವೆಂಬರ್ ಗೆ 100ನೇ ವರ್ಷ ಪೂರೈಸುತ್ತದೆ. ಈ ಹಿನ್ನೆಲೆ ಶತಮಾನೋತ್ಸವ ಸಂಭ್ರಮ ಆಚರಣೆ ಮಾಡಲಾಗುವುದು ಎಂದರು. ಈ ಸಮಾರಂಭಕ್ಕೆ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಮಂತ್ರಿಗಳನ್ನು ಆಹ್ವಾನಿಸಲಾಗುವುದೆಂದರು.
ಲಲಿತ ಮಹಲ್ ಹೋಟೆಲ್ ಕೇವಲ ಶ್ರೀಮಂತರಿಗೆ ಮಾತ್ರ ಎನ್ನುವಂತಾಗಿದೆ. ಸಾಮಾನ್ಯ ಜನರು, ಸ್ಥಳೀಯರು ಈ ಹೊಟೇಲ್‍ಗೆ ಬರುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದೆಂದು ಅಪ್ಪಣ್ಣ ಅವರು ತಿಳಿಸಿದರು.