ಮೊಬೈಲ್, ಬೈಕ್ ಕಳ್ಳನ ಬಂಧನ

ಮೈಸೂರು: ಮೊಬೈಲ್ ಮತ್ತು ಬೈಕ್ ಕಳವು ಪ್ರಕರಣದ ಕಳ್ಳನೊಬ್ಬನನ್ನು ನಗರದ ದೇವರಾಜ ಠಾಣಾ ಪೆÇಲೀಸರು ಬಂಧಿಸಿದ್ದಾರೆ.
ಆತನಿಂದ 70 ಸಾವಿರ ರೂ. ಬೆಲೆಯ 4 ಮೊಬೈಲ್ ಫೆÇೀನ್ ಮತ್ತು 60 ಸಾವಿರ ರೂ. ಬೆಲೆಬಾಳುವ 2 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಲೀಲಾ ಎಂಬವರು ಡಿ. 31ರಂದು ಬೆಳಿಗ್ಗೆ ಹಣ ಡ್ರಾ ಮಾಡಲು ರಮಾವಿಲಾಸ ರಸ್ತೆಯಲ್ಲಿರುವ ಐಸಿಐಸಿಐ ಬ್ಯಾಂಕ್ ನ ಎಟಿಎಂಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಕೈನಲ್ಲಿ ಹಿಡಿದುಕೊಂಡಿದ್ದ ಮೊಬೈಲ್ ನ್ನು ಹಿಂಬದಿಯಿಂದ ಬಳಿ ಬಣ್ಣದ ಹೋಂಡಾ ಸ್ಕೂಟರ್ ನಲ್ಲಿ ಬಂದ 20ರಿಂದ 25ರವಯಸ್ಸಿನ ಹುಡುಗ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದನೆಂದು ದೂರು ನೀಡಿದ್ದರು.
ಈ ಪ್ರಕರಣ ತನಿಖೆ ಕೈಗೊಂಡ ಪೊಲೀಸರು ಜ. 3ರಂದು ರಾತ್ರಿ ಮೈಸೂರಿನ ಗೌಸಿಯಾನಗರದ ಉಸ್ಮಾನಿಯಾ ಬ್ಲಾಕ್ ಮಸೀದಿ ಬಳಿ ಸೈಯದ್ ವಾಸೀಂ (23) ಎಂಬಾತ ಕೃತ್ಯಕ್ಕೆ ಬಳಸಿದ್ದ ಬಿಳಿ ಬಣ್ಣದ ಹೋಂಡಾ ಸ್ಕೂಟರ್ ನ್ನು ನಿಲ್ಲಿಸಿದ್ದನ್ನು ಪತ್ತೆ ಹಚ್ಚಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ಈತ ದೇವರಾಜ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಮತ್ತು ಬೆಳಗಿನ ವೇಳೆ ಮೊಬೈಲ್ ನಲ್ಲಿ ಮಾತನಾಡಿಕೊಂಡು ಒಂಟಿಯಾಗಿ ಹೋಗುವ ಸಾರ್ವಜನಕರ ಮೊಬೈಲ್ ಕಿತ್ತುಕೊಂಡು ಹೋಗುವುದರ ಕುರಿತು ಮಾಹಿತಿ ನೀಡಿ, ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಬೈಕ್ ಕಳುವು ಮಾಡಿರುವುದಾಗಿ ತಿಳಿಸಿದ್ದಾನೆ.
ಈತನಿಂದ ವಿವಿಧ ಕಂಪನಿಗೆ ಸೇರಿದ 70 ಸಾವಿರ ರೂ. ಮೌಲ್ಯದ ಒಟ್ಟು ನಾಲ್ಕು ಮೊಬೈಲ್ ಮತ್ತು 60 ಸಾವಿರ ರೂ. ಮೌಲ್ಯದ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ದೇವರಾಜ ಪೆÇಲೀಸ್ ಠಾಣಾ ವ್ಯಾಪ್ತಿಯ ಎರಡು ದ್ವಿಚಕ್ರವಾಹನ ಕಳುವು ಪ್ರಕರಣ ಮತ್ತು ಒಂದು ಮೊಬೈಲ್ ಸುಲಿಗೆ ಪ್ರಕರಣ ಈತನ ಬಂಧನದಿಂದ ಪತ್ತೆಯಾಗಿದೆ.
ಈ ಪತ್ತೆ ಕಾರ್ಯವನ್ನು ಡಿಸಿಪಿ ಗೀತಾ ಪ್ರಸನ್ನ ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಪ್ರಭಾರ ಎಸಿಪಿ ಮರಿಯಪ್ಪ ನೇತೃತ್ವದಲ್ಲಿ ದೇವರಾಜ ಪೆÇಲೀಸ್ ಠಾಣೆಯ ಇನ್ಸಪೆಕ್ಟರ್ ದಿವಾಕರ್, ಪಿಎಸ್ ಐ ಲೀಲಾವತಿ, ಎಎಸ್ ಐ ಉದಯ್ ಕುಮಾರ್, ಸಿಬ್ಬಂದಿಗಳಾದ ಸೋಮಶೆಟ್ಟಿ, ವೇಣುಗೋಪಾಲ್, ಸುರೇಶ್, ನಂದೀಶ್, ಪ್ರದೀಪ್, ವೀರೇಶ್ ಬಾಗೇವಾಡಿ ಈ ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.