ಮೈಸೂರು: ದೇವಾಲಯದ ಬೀಗ ಒಡೆದು ನಗ-ನಾಣ್ಯ ಅಪಹರಿಸಿಕೊಂಡು ಹೋಗಿರುವ ಘಟನೆ ಜಿಲ್ಲೆಯ ಕೆ. ಆರ್. ನಗರ ತಾಲ್ಲೂಕಿನಲ್ಲಿ ನಡೆದಿದೆ.
ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿನ ಆದಿಶಕ್ತಿ ಮುತ್ತುತಾಳಮ್ಮ ಮತ್ತು ವೀರಭದ್ರೇಶ್ವರ ದೇವಸ್ಥಾನದಲ್ಲಿ ಈ ಕಳ್ಳತನ ನಡೆದಿದೆ.
ಮುತ್ತುತಾಳಮ್ಮ ದೇವಾಲಯದಲ್ಲಿ 15 ಗ್ರಾಂ ಚಿನ್ನದ ತಾಳಿ ಮತ್ತು ಗುಂಡು, 250 ಗ್ರಾಂ ಬೆಳ್ಳಿ ಹಾಗೂ ಗೊಲುಕದಲ್ಲಿದ್ದ ಅಂದಾಜು 10 ಸಾವಿರ ನಗದನ್ನು ಕಳ್ಳರು ಎತ್ತಿಕೊಂಡು ಹೋಗಿದ್ದಾರೆ.
ವೀರಭದ್ರೇಶ್ವರ ದೇವಾಲಯದಲ್ಲಿ 1500 ಗ್ರಾಂ ಬೆಳ್ಳಿಯ 2 ಬಸವ 1 ಕುದುರೆ 3 ಲಿಂಗದ ಕಾಯಿ ಮತ್ತು ಗೊಲುಕದಲ್ಲಿದ್ದ ಅಂದಾಜು 12 ಸಾವಿರ ರೂ. ಹಣವನ್ನ ಕಳ್ಳರು ಕಳವು ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಕೆ.ಆರ್.ನಗರ ಠಾಣೆಯ ಪೆÇಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.