ನಕಲಿ ದಾಖಲೆ ಸೃಷ್ಠಿಸಿ ಕೋಟ್ಯಾಂತರ ರೂ. ಸಾಲಕ್ಕೆ ಯತ್ನಿಸಿದ ವಂಚಕರು ಪೊಲೀಸರ ವಶಕ್ಕೆ

ಮೈಸೂರು, ಜ. 7- ಮೈಸೂರು ನಗರಾಭಿದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಠಿಸಿ ಕೋಟ್ಯಾಂತರ ರೂ. ಬ್ಯಾಂಕ್ ಸಾಲ ಪಡೆಯಲು ಯತ್ನಿಸಿದ ವಂಚಕರ ಜಾಲವನ್ನು ಬೇಧಿಸಲಾಗಿದೆ.
ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮತ್ತು ಪ್ರಾಧಿಕಾರದ ವಕೀಲೆ ಸ್ಮಿತಾ ದೇವಯ್ಯ ಅವರು ಬೀಸಿದ ಬಲೆಗೆ ವಂಚಕರು ಸಿಕ್ಕಿ ಬಿದ್ದಿದ್ದಾರೆ.
ಮೈಸೂರಿನ ಯಾದವಗಿರಿಯ ನಿವೇಶನಕ್ಕೆ ಸಂಬಂಧಿಸಿದಂತೆ ಎಸ್ ಬಿಐಗೆ 6 ಕೋಟಿ ರೂ. ಸಾಲಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಸಾಲ ನೀಡುವ ಸಂಬಂಧ ಬ್ಯಾಂಕ್ ನವರು ತಮ್ಮ ಪ್ಯಾನಲ್ ನಲ್ಲಿರುವ ವಕೀಲರಾದ ಸ್ಮಿತಾ ಅವರ ಬಗ್ಗೆ ಕಾನೂನು ಸಲಹೆ ಕೇಳಿದ್ದಾರೆ.
ಸಾಲಕ್ಕಾಗಾಗಿ ನೀಡಿದ್ದ ನಿವೇಶನದ ದಾಖಲಾತಿ ಸಂಶಯ ಮೂಡಿಸಿದ ಕಾರಣ ಸ್ಮಿತಾ ಅವರು ಅನುಮಾನಗೊಂಡು ಮಾಹಿತಿ ಕಲೆ ಸಂಗ್ರಹಿಸಿದ್ದಾರೆ.
ಸಾಲಕ್ಕೆ ಅರ್ಜಿ ಸಲ್ಲಿಸಿದ್ದ ನಿವೇಶನಕ್ಕೂ ಸಬ್ ರಿಜಿಸ್ಟಾರ್ ಕಛೇರಿಯಲ್ಲಿದ್ದ ದಾಖಲೆಗೂ ತಾಳೆ ಆಗದಿರುವುದು ಕಂಡು ಬಂದಿದೆ.
ನಂತರ ಸ್ಮಿತಾ ಅವರು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮತ್ತು ಆಯುಕ್ತ ನಟರಾಜ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ನಕಲಿ ದಾಖಲಾತಿ ಸೃಷ್ಠಿಸಿದ ಜಾಲವನ್ನು ಬೇಧಿಸಲು ಮತ್ತಷ್ಟು ಮಾಹಿತಿ ಬೇಕೆಂದು ಕೋರಿದಾಗ ನಕಲಿ ದಾಖಲಾತಿ ಸೃಷ್ಠಿಸಿದ್ದ ಮೂವರು ಸ್ಮಿತಾ ಅವರ ಕಛೇರಿಗೆ ಬಂದಿದ್ದಾರೆ. ಆಗ ಪೆÇಲೀಸರು ವಕೀಲರ ಕಛೇರಿಯಲ್ಲಿದ್ದ ಮೂವರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ಸಂಬಂಧ ನಗರದ ಲಕ್ಷ್ಮಿಪುರಂ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ವಂಚಕರ ಜಾಲ ಬೇಧಿಸಲು ಶ್ರಮವಹಿಸಿದ ಸ್ಮಿತಾ ಅವರನ್ನು ರಾಜೀವ್ ಅವರು ಅಭಿನಂದಿಸಿದರು.