ಮೈಸೂರು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಅಂತರರಾಜ್ಯ ವ್ಯಕ್ತಿಯೊಬ್ಬನನ್ನು ನಗರದ ಉದಯಗಿರಿ ಠಾಣಾ ಪೆÇಲೀಸರು ಬಂದಿಸಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂನ ಜಿಎಂವಿಪಿ ಕಾಲೋನಿ ನಿವಾಸಿ ಬೆನೋತ್ ವೆಂಕಣ್ಣ (45) ಬಂಧಿತ ಆರೋಪಿ.
ಬಂಧಿತನಿಂದ 5.50ಲಕ್ಷರೂ.ಮೌಲ್ಯದ 22ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದಿಂದ ಗಾಂಜಾ ತಂದು ಮೈಸೂರಿನ ಸಾತಗಳ್ಳಿ ಡಿಪೆÇೀ ಬಳಿ ಈತ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೆÇಲೀಸರು ಬಮಧಿಸಿದ್ದಾರೆ.
ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಉದಯಗಿರಿಯ ಮಹದೇವ್ ಎಂಬಾತನಿಗೆ ಈ ಗಾಂಜಾ ಕೊಡಲು ಬಂದಿರುವುದಾಗಿ ತಿಳಿಸಿದ್ದಾನೆ.
ಉದಯಗಿರಿ ಪೆÇಲೀಸ್ ಠಾಣೆಯ ಇನ್ಸಪೆಕ್ಟರ್ ಎನ್.ಎಂ.ಪೂಣಚ್ಚ, ಪಿಎಸ್ ಐಗಳಾದ ಎಂ.ಜೈಕೀರ್ತಿ, ಮದನ್ ಕುಮಾರ್, ನಟರಾಜ್, ಎಎಸ್ ಐ ದಿವಾಕರ್, ಸಿಬ್ಬಂದಿಗಳಾದ ಎಂ.ಶಂಕರ್,ಸಿದ್ದಿಕ್ ಅಹ್ಮದ್, ಮೋಹನ್ ಕುಮಾರ್, ಆರ್.ಎಸ್.ಕೃಷ್ಣ, ಶಿವರಾಜಪ್ಪ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.