ಕಾರಿನಲ್ಲಿ ಗೋವು ಸಾಗಣೆ: ವ್ಯಕ್ತಿ ಬಂಧನ

ಮೈಸೂರು: ಅಕ್ರಮವಾಗಿ ಗೋವು ಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ನಗರದ ಲಷ್ಕರ್ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಬಂಧಿತನಿಂದ ಸಾಗಣೆಗೆ ಬಳಸಿದ ಒಂದು ಕಾರು ಮತ್ತು 2 ಎಮ್ಮೆ ಕರು ಮತ್ತು 1 ಹಸುವಿನ ಕರುವನ್ನು ವಶಪಡಿಸಿಕೊಂಡಿದ್ದಾರೆ.
ಕೇರಳದ ಕಣ್ಣೂರು ಜಿಲ್ಲೆಯ ಶಿವಪುರಂನ ಸಮೀರ್ (34) ಬಂಧಿತ ಆರೋಪಿ.
ಪೆÇಲೀಸರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಗಸ್ತು ಮಾಡುತ್ತಿದ್ದ ವೇಳೆ ಇರ್ವಿನ್ ರಸ್ತೆಯಲ್ಲಿ ಅಕ್ರಮವಾಗಿ ಗೋವು ಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿಯ ಆಧರಿಸಿ ಕಾರ್ಯಾಚರಣೆ ನಡೆಸಿದ್ದಾರೆ.
ಇರ್ವಿನ್ ರಸ್ತೆಯ ಪೆÇೀಸ್ಟ್ ಆಫೀಸ್ ಬಳಿ ನಿಂತಿದ್ದ ಕಾರ್ ಒಂದನ್ನು ಪರಿಶೀಲಿಸಿದಾಗ ಕಾರಿನಲ್ಲಿ ಅಕ್ರಮವಾಗಿ 2 ಎಮ್ಮೆ ಕರು ಮತ್ತು 1 ಹಸುವಿನ ಕರು ಇರುವುದು ಪತ್ತೆಯಾಗಿದೆ.
ಲಷ್ಕರ್ ಠಾಣೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.