ಮೈಸೂರು: ಮೈಸೂರು ತಾಲೂಕಿನ ಮಂಡಕಳ್ಳಿ ಗ್ರಾಮದ ಮಡಿಕೋಟೆಗೌಡ (48) ಮತ್ತವರ ಪುತ್ರ ಸತೀಶ್ ಕುಮಾರ್ (25) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಲೀಸರು ಮೂರು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮಂಡಕಳ್ಳಿ ಗ್ರಾಮದ ವಾಸಿಗಳಾದ ಮಂಜುನಾಥ್ (22), ಮಹದೇವಸ್ವಾಮಿ (22) ಹಾಗೂ ಸತೀಶ್(22) ಎಂದು ಗುರುತಿಸಲಾಗಿದೆ.
ಕೊಲೆಯಾದ ಸತೀಶ್ ಕುಮಾರ್ ಹಾಗೂ ಕೊಲೆ ಮಾಡಿದ ವ್ಯಕ್ತಿಗಳಿಗೆ ಮೊದಲಿನಿಂದಲೂ ಹಳೆ ವೈಷಮ್ಯ ಇತ್ತು ಎನ್ನಲಾಗಿದೆ. ಈ ಕಾರಣದಿಂದ ಸತೀಶ್ ಕುಮಾರ್ ನನ್ನು ಡಿ. 26ರಂದು ಎಪಿಎಂಸಿ ಸಮೀಪ ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಹಿಂದಿನಿಂದ ಬಂದ ದುಷ್ಕರ್ಮಿಗಳು ಕೊಲೆ ಮಾಡಿ ಶವವನ್ನು ಪೆÇದೆಯೊಂದರಲ್ಲಿ ಎಸೆದಿದ್ದರು.
ಒಂದೆರಡು ದಿನಗಳ ನಂತರ ಮರಿಕೋಟೆಗೌಡ ಮಗ ಕಾಣೆಯಾಗಿರುವ ಕುರಿತು ಪೆÇಲೀಸರಿಗೆ ದೂರು ನೀಡಿದ್ದರು.
ಪೆÇಲೀಸ್ ತನಿಖೆಯಲ್ಲಿ ಪುತ್ರ ಕೊಲೆಯಾಗಿರುವುದು ಗೊತ್ತಾದರೆ ತಂದೆ ಮರಿಕೋಟೆಗೌಡ ಕೊಲೆ ಮಾಡಬಹುದೆಂದು ಹೆದರಿ ಜ. 2ರಂದು ಮಡಿಕೋಟೆ ಗೌಡರನ್ನು ಮಂಡಕಳ್ಳಿ-ಶ್ರೀನಗರ ರಸ್ತೆ ಮಧ್ಯದಲ್ಲಿ ಕೊಲೆ ಮಾಡಿರುವುದಾಗಿ ಆರೋಪಿಗಳು ತಪೆÇ್ಪಪ್ಪಿಕೊಂಡಿದ್ದಾರೆಂದು ಪೆÇಲೀಸರು ತಿಳಿಸಿದ್ದಾರೆ.
ಕೊಲೆಯಾದ ಸತೀಶ್ ಕುಮಾರ್ ಮೃತದೇಹ ಬರೋಬ್ಬರಿ 14 ದಿನಗಳ ನಂತರ ಪತ್ತೆಯಾಗಿದೆ.
ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಆರ್. ಶಿವಕುಮಾರ್, ಸಿಪಿಐ ಜೀವನ್, ಪಿಎಸ್ ಐ ವನರಾಜು ನೃತೃತ್ವದ ತಂಡ ಪತ್ತೆಕಾರ್ಯ ನಡೆಸಿದೆ.