ಚಾಮರಾಜನಗರ: ಇಬ್ಬರ ನಡುವೆ ನಡೆದ ಜಗಳದಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಭುಜಗನಪುರ ಗ್ರಾಮದ ಸಿದ್ದಯ್ಯನ ಮಗ ಗುರುಸಿದ್ದಯ್ಯ ಎಂಬಾತನೆ ಸಾವಿಗೀಡಾದವನಾಗಿದ್ದಾನೆ.
ಗುರುಸಿದ್ದಯ್ಯ ಮತ್ತು ಪಕ್ಕದ ಮನೆಯ ನಾರಾಯಣ ಸ್ವಾಮಿ ನಡುವೆ ಕ್ಷುಲಕ ಕಾರಣಕ್ಕೆ ಆಗಾಗ ತಗಾದೆ ನಡೆಯುತ್ತಿತ್ತು ಎನ್ನಲಾಗಿದೆ.
ಕಳೆದ ರಾತ್ರಿ ಇವರಿಬ್ಬರ ನಡುವಿನ ಜಗಳ ತಾರಕ್ಕೇರಿ ಗುರುಸಿದ್ದಯ್ಯನ ಮುಖಕ್ಕೆ ನಾರಾಯಣಸ್ಷಾಮಿ ತಲೆಯಿಂದ ಗುದ್ದಿದ ಎನ್ನಲಾಗಿದ್ದು ಇದರಿಂದ ಗುರು ಸಿದ್ದಯ್ಯನ ಸಾವು ಸಂಭವವಿಸಿದೆ ಎಂದು ತಿಳಿದು ಬಂದಿದೆ.
ಗ್ರಾಮಾಂತರ ಠಾಣಾ ಪೆÇಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.