ಮುಂದಿನ ಎರಡೂವರೆ ವರ್ಷವೂ ಯಡಿಯೂರಪ್ಪನವರೇ ನಮ್ಮ ಕ್ಯಾಪ್ಟನ್ -ಶಾಸಕ ರಾಮದಾಸ್

ಮೈಸೂರು: ಮುಖ್ಯಮಂತ್ರಿ ಯಡಿಯೂರಪ್ಪನವರೇ ನಮ್ಮ ಕ್ಯಾಪ್ಟನ್ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.
ಶ್ರೀಕ್ಷೇತ್ರ ಸುತ್ತೂರಿನಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ರಾಮದಾಸ್ ಮಾತನಾಡಿದರು.
ಮುಂದಿನ ಎರಡೂವರೆ ವರ್ಷವೂ ಅವರೇ ನಮ್ಮ ಕ್ಯಾಪ್ಟನ್ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.
ಸಿಎಂ ಬಿಎಸ್ ವೈ ಅವರ ತಂಡದಲ್ಲಿ ಯಾರಿರಬೇಕು ಎಂಬುದನ್ನು ಅವರೇ ನಿರ್ಧಾರ ಮಾಡುತ್ತಾರೆ. ನನಗೂ ಅವಕಾಶ ಕೊಟ್ಟರೆ ಸ್ವಚ್ಛವಾಗಿ ಆಡಳಿತ ನಡೆಸುತ್ತೇನೆ ಎಂದರು.
ಒಂದು ವೇಳೆ ಕೊಡದೆ ಇದ್ದರೂ ನನಗೆ ಏನು ಬೇಸರ ಇಲ್ಲ. ನಾವು ಯಾವುದೇ ನಿರೀಕ್ಷೆ ಆಸೆಗಳನ್ನು ಇಟ್ಟುಕೊಂಡಿಲ್ಲ. ಸಚಿವ ಸ್ಥಾನ ಸಿಕ್ಕರೆ ಹೆಚ್ಚಿನ ಜವಬ್ದಾರಿಯಿಂದ ಕೆಲಸ ಮಾಡುತ್ತೇನೆ. ಸಿಗದೆ ಇದ್ದರೂ ನಮ್ಮ ಕೆಲಸ ನಾವು ಮಾಡುತ್ತೇವೆ ಎಂದರು ರಾಮದಾಸ್.
ಮುಂದಿನ ಎರಡೂವರೆ ವರ್ಷವೂ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಮನೆಯ ಯಜಮಾನರು ಅವರೇ ಆಗಿರಲಿದ್ದಾರೆ. ಯಜಮಾನ ಎನ್ನುವುದಕ್ಕಿಂತ. ನಾವೇ ಮನೆಯವರೇ ಯಜಮಾನ ಎಂದು ಹೇಳುವುದು ಸೂಕ್ತ ಎಂದು ಶಾಸಕ ಎಸ್. ಎ. ರಾಮದಾಸ್ ಹೇಳಿದರು.