ವಿವೇಕಾನಂದರ ಆದರ್ಶ ಯುವಜನತೆಗೆ ತಲುಪಿಸಿದರೆ ರಾಷ್ಟ್ರಪ್ರಜ್ಞೆ ಬೆಳಗಲಿದೆ -ಹೇಮಂತ್ ಕುಮಾರ್ ಗೌಡ

ಮೈಸೂರು: ಭಾರತೀಯ ಧಾರ್ಮಿಕ ಪರಂಪರೆ ಸಾಕ್ಷಿಪ್ರಜ್ಞೆಯಂತಿದ್ದ ಸ್ವಾಮಿ ವಿವೇಕಾನಂದರ ಆದರ್ಶ ಯುವಜನತೆಗೆ ತಲುಪಿಸಿದರೆ ರಾಷ್ಟ್ರಪ್ರಜ್ಞೆ ಬೆಳಗಲಿದೆ ಎಂದು ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ತಿಳಿಸಿದರು.
ಮೈಸೂರು ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ವತಿಯಿಂದ ವಸ್ತು ಪ್ರದರ್ಶನ ಆವರಣದಲ್ಲಿ ಮಂಗಳವಾರ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿವೇಕಾನಂದರು ಯುವಜನರ ಹೃದಯದಲ್ಲಿ ಶೌರ್ಯ ಧೈರ್ಯದ ಪರಿಕಲ್ಪನೆ ತುಂಬಲು ದೇಶದಾದ್ಯಂತ ಸಂಚರಿಸಿದರು. ಯುವ ಜನತೆಗೆ ವಿವೇಕಾನಂದರ ಜೀವನದ ಮಹತ್ವ ತಿಳಿಸಿಕೊಡುವ ಕೆಲಸ ಮಾಡಬೇಕಿದೆ ಎಂದವರು ತಿಳಿಸಿದರು.
ಮೈಮುಲ್ ನಿರ್ದೇಶಕ ಅಶೋಕ್ ಮಾತನಾಡಿ, ವಿಶ್ವದ ಎಲ್ಲ ಧರ್ಮಗಳಿಗೂ ಹಿಂದೂ ಧರ್ಮವೇ ಆಧಾರಸ್ತಂಭ. ಅಧ್ಯಾತ್ಮ, ಸಾಮರಸ್ಯ ಮತ್ತು ಸಮೃದ್ಧ ಸಂಸ್ಕೃತಿಯ ತವರೂರು ಭಾರತ ಎಂದು ತಿಳಿಸಿಕೊಟ್ಟವರು ಸ್ವಾಮಿ ವಿವೇಕಾನಂದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಲ್ ಆರ್ ಮಹಾದೇವಸ್ವಾಮಿ, ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಒ ಗಿರೀಶ್, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಲಕ್ಷ್ಮಿದೇವಿ, ಜಿಲ್ಲಾ ಪಂಚಾಯತ್ ಸದಸ್ಯ ಗುರುಸ್ವಾಮಿ, ಯುವ ಮುಖಂಡರಾದ ವಿಕ್ರಮ ಅಯ್ಯಂಗಾರ್, ಪಂಚಾಕ್ಷರಿ, ಉಮೇಶ್ ಕುಮಾರ್, ಮಹದೇವು, ಕುಮಾರ್, ಶ್ರೀನಿವಾಸ, ರವೀಂದ್ರ, ಲೋಹಿತ್ ಉಪಸ್ಥಿತರಿದ್ದರು.