ಮೈಸೂರು: ವಿವೇಕಾನಂದರ ಸಂದೇಶ ಇಂದಿನ ಯುವಸಮೂಹಕ್ಕೆ ಆದರ್ಶವಾಗಿದೆ ಎಂದು ಶಾಸಕರಾದ ಎಲ್. ನಾಗೇಂದ್ರ ಅವರು ಹೇಳಿದರು.
ಜೈಹಿಂದ್ ಯುವ ಸಂಘಟನೆ ವತಿಯಿಂದ ಸ್ವಾಮಿ ವಿವೇಕಾನಂದರ 158ನೇ ಜನ್ಮದಿನೋತ್ಸವದ ಅಂಗವಾಗಿ ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ವಿವೇಕ ಸ್ಮಾರಕದಲ್ಲಿ ನನ್ನ ದೇಶ ನನ್ನ ಸಾಧನೆ ವಿದ್ಯಾರ್ಥಿಗಳಿಗೆ ಮತ್ತು ಯುವ ಸಮೂಹಕ್ಕೆ ಸ್ವಾಮಿ ವಿವೇಕಾನಂದರ ಸಂದೇಶಗಳ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಶಾಸಕ ಎಲ್. ನಾಗೇಂದ್ರ ಚಾಲನೆ ನೀಡಿ ಮಾತನಾಡಿದರು.
ಬ್ರಿಟಿಷರ ಆಡಳಿತದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ದಬ್ಬಾಳಿಕೆ ಅತಿಹೆಚ್ಚಾಗಿದ್ದ ಸಮಯದಲ್ಲಿ ಜಾತಿ ಧರ್ಮಗಳ ಒಳಪಂಗಡಗಳ ಗೊಂದಲ ನಿರ್ಮಾಣವಾಗದಂತೆ ವಿವೇಕಾನಂದರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಸಂಚರಿಸಿ ಸ್ವದೇಶಿ ಸಂಸ್ಕೃತಿಯನ್ನು ರಾಷ್ಟ್ರದ್ಯಂತ ಸಾರಿ ನಾವೆಲ್ಲರೂ ಭಾರತೀಯರೆಂದು ಕರೆ ನೀಡಿದರು ಎಂದರು.
ರಾಮಕೃಷ್ಣ ಮಠದ ಪುಣ್ಯವ್ರತಾನಂದ ಜೀ ರವರು ಮಾತನಾಡಿ, ಯುವಕರು ದುರಭ್ಯಾಸದಿಂದ ದೂರವಾಗಿ ರೈತ ಉತ್ಪನ್ನ, ದೇಸಿ ವಸ್ತುಗಳನ್ನು ಬಳಸಿ ಸಮಾಜವನ್ನು ಉಳಿಸುವ ಜವಬ್ದಾರಿಯ ವಿಷಯವಾಗಿ ಚಿಂತಿಸಬೇಕು ಎಂದರು.
ಚಿಕ್ಕವಯಸ್ಸಿನಲ್ಲಿ ವಿದ್ಯಾರ್ಥಿಗಳು ಆಧ್ಯಾತ್ಮಿಕ ಸಾತ್ವಿಕ ಮನೋಭಾವ ಅಳವಡಿಸಿಕೊಂಡರೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದು ಮುಖ್ಯವಾಹಿನಿಗೆ ಬರಬಹುದು ಎಂದು ಕಿವಿಮಾತು ಹೇಳಿದರು
ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ. ಪ್ರಕಾಶ್ ರವರು ಮಾತನಾಡಿ, ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದರು 1891ರಲ್ಲಿ ತಂಗಿದ್ದ ಸ್ಥಳವನ್ನು ವಿವೇಕ ಸ್ಮಾರಕವನ್ನಾಗಿ ಸಂರಕ್ಷಿಸಲು ಕರ್ನಾಟಕ ಸರ್ಕಾರ ಮುಂದಾಗಬೇಕಿದೆ ಎಂದರು
ನಗರಪಾಲಿಕೆ ಸದಸ್ಯರಾದ ಪ್ರಮಿಳಾ ಭರತ್, ಜೈ ಹಿಂದ್ ಯುವ ಸಂಘಟನೆ ಅಧ್ಯಕ್ಷ ಅಜಯ್ ಶಾಸ್ತ್ರಿ, ಬಿಜೆಪಿ ಮುಖಂಡರಾದ ಜೋಗಿ ಮಂಜು, ರಾಕೇಶ್ ಭಟ್, ಪ್ರಮೋದ್ ಗೌಡ, ಗಿರೀಶ್, ಸಚಿನ್, ಸುಚೀಂದ್ರ, ಚಕ್ರಪಾಣಿ, ಅಶ್ವಿನ್, ರವಿ, ಟಿಎಸ್ ಅರುಣ್, ಮುಂತಾದವರು ಇದ್ದರು.