ಮನೆ ಹಿಂಬಾಗಿಲು ಮೀಟಿ ಚಿನ್ನಾಭರಣ ಕಳುವು

ಮೈಸೂರು: ಮನೆಯೊಂದರ ಹಿಂಬಾಗಿಲು ಮೀಟಿ ಒಳ ನುಗ್ಗಿರುವ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ.
ಈ ಕಳವು ಪ್ರಕರಣ ವಿಜಯನಗರದ 3ನೇ ಹಂತದ ವಾಸಿ ಪುಷ್ಪಲತಾ ಅವರ ಮನೆಯಲ್ಲಿ ನಡೆದಿದೆ.
ಕಳ್ಳರು ಪುಷ್ಪಲತಾ ಅವರ ಮನೆಯಲ್ಲಿದ್ದ 1 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ಅಪಹರಿಸಿಕೊಂಡು ಹೋಗಿದ್ದಾರೆ.
ಪುಷ್ಪಲತಾ ಸಂಸಾರ ಸಮೇತ ಜ. 8ರಂದು ಮನೆಗೆ ಬೀಗ ಹಾಕಿಕೊಂಡು ಬೇರೆ ಊರಿಗೆ ತೆರಳಿದ್ದರು.
ಮನೆಗೆ ಮರಳಿದಾಗ ಮನೆಯ ಹಿಂಬಾಗಿಲನ್ನು ಮೀಟಿ ಒಳಪ್ರವೇಶಿಸಿದ ಕಳ್ಳರು ಚಿನ್ನಾಭರಣಗಳನ್ನು ಮತ್ತು ಇತರ ವಸ್ತುಗಳನ್ನು ಕಳುವು ಮಾಡಿರುವುದು ಗೊತ್ತಾಗಿದೆ.
ಈ ಬಗ್ಗೆ ವಿಜಯ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.