ಕೋವಿಡ್ ಲಸಿಕಾ ಅಭಿಯಾನಕ್ಕೆ ಮೈಸೂರಿನಲ್ಲಿ ಚಾಲನೆ

ಮೈಸೂರು: ಬಹುನಿರೀಕ್ಷಿತ ಕೋವಿಡ್ ಲಸಿಕಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡುತ್ತಿದ್ದಂತೆ ದೇಶಾದ್ಯಂತ ಚಾಲನೆ ಲಭಿಸಿದ್ದು ಮೈಸೂರು ಜಿಲ್ಲೆಯ 9 ಕೇಂದ್ರಗಳಲ್ಲಿಯೂ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕೋವಿಡ್ ಲಸಿಕೆ ವಿತರಣೆಗೆ ಮೈಸೂರಿನ ಮೇಟಗಳ್ಳಿಯಲ್ಲಿನ ಪಿಕೆಟಿಬಿ ಆಸ್ಪತ್ರ ಆವರಣದಲ್ಲಿ ಸಿದ್ಧತೆ ನಡೆಸಲಾಗಿದ್ದು, ಕೊರೋನ ಲಸಿಕೆ ವಿತರಣೆ ಹಿನ್ನಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಪ್ರವೇಶದ್ವಾರದಲ್ಲಿ ರಂಗೋಲಿ ಬಿಡಿಸಿ, ಬಲೂನ್ ಗಳನ್ನು ಕಟ್ಟಿ, ಸಿಂಗರಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗಿತ್ತು.
100 ಮಂದಿಗೆ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎಲ್‍ಇಡಿ ಸ್ಕ್ರೀನ್ ಮೂಲಕ ಪ್ರಧಾನಿ ಮೋದಿ ಭಾಷಣವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆ ಕುಳಿತು ವೀಕ್ಷಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಮುಕ್ತಾಯವಾಗುತ್ತಲೇ ಮೈಸೂರು ಜಿಲ್ಲೆಯಲ್ಲಿ ಲಸಿಕೆ ವಿತರಣೆಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಚಾಲನೆ ನೀಡಿದರು.
ಮೊದಲÉ್ಕೂೀವಿಡ್ ಲಸಿಕೆಯನ್ನು ಕೋವಿಡ್ ನಿಂದ ಸಾವನ್ನಪ್ಪಿದವರನ್ನು ಸಾಗಿಸುವ ಕೊರೊನಾ ವಾರಿಯರ್ ಸಂದೇಶ್ ಅವರಿಗೆ ನಿಡಲಾಯಿತು.
ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 15,327ಸರ್ಕಾರಿ ಮತ್ತು 19,537ಖಾಸಗಿ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರು ಸೇರಿ ಒಟ್ಟು 34,864ಜನರಿಗೆ ಲಸಿಕೆ ನೀಡಲಾಗುತ್ತದೆ. ಇವರ ಹೆಸರು ಮತ್ತು ಇತರ ಮಾಹಿತಿಯನ್ನು ಕೋವಿನ್ ಆನ್ ಲೈನ್ ಪೆÇೀರ್ಟಲ್ ನಲ್ಲಿ ದಾಖಲಿಸಲಾಗಿದೆ. 299 ಸರ್ಕಾರಿ ಮತ್ತು 123 ಖಾಸಗಿ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ.
ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆಯ ಎರಡು ಡೋಸ್ ಗಳನ್ನು ನೀಡಲಾಗುತ್ತದೆ.
ಮೊದಲ ಸಲ ಪ್ರತಿ ಫಲಾನುಭವಿಗೆ 0.5ಎಂ ಎಲ್ ಡೋಸ್ ನೀಡಲಾಗುತ್ತದೆ. ಇದಾದ 28 ದಿನ ಬಳಿಕ ಮತ್ತೊಂದು ಡೋಸ್ ಪಡೆಯುವುದು ಕಡ್ಡಾಯವಾಗಿದೆ.
ಜಿಲ್ಲೆಯಲ್ಲಿ 34,864ಮಂದಿ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದು, ಜಿಲ್ಲೆಗೆ 20,500 ಕೋವಿಡ್ ಲಸಿಕೆಯ ಡೋಸ್ ಬಂದಿದೆ.