ಮೈಸೂರು: ಪತ್ನಿ ನಡತೆ ಶಂಕಿಸಿ ಆಕೆಯನ್ನು ಕೊಲೆ ಮಾಡಿ ಪರಾರಿ ಆಗಿದ್ದ ಪತಿಯನ್ನು ಹುಣಸೂರು ಪೊಲೀಸರು ಬಂಧಿಸಿದ್ದಾರೆ.
ಹುಣಸೂರಿನ ಕಲ್ಕುಣಿಕೆ ಹೌಸಿಂಗ್ ಬೋರ್ಡ್ ಕಾಲೋನಿ ವಾಸಿ ರವಿ ಬಂಧಿತ ಆರೋಪಿ.
ಈತ ತನ್ನ ಪತ್ನಿ ಸೌಮ್ಯ(30)ಳನ್ನು ಕೊಲೆಗೈದು ಪರಾರಿ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಡ್ಯದ ಸಾತನೂರು ಗ್ರಾಮದ ಶಿವಣ್ಣ ಅವರ ಮಗಳಾದ ಆಶಾ ಕಾರ್ಯಕರ್ತೆ ಸೌಮ್ಯಳನ್ನು ಕಳೆದ 11 ವರ್ಷಗಳ ಹಿಂದೆ ರವಿ ವಿವಾಹವಾಗಿದ್ದನು.
ಇವರಿಗೆ 9 ವರ್ಷದ ಗೌರವ್, 7 ವರ್ಷದ ಅಕುಲ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
ಇತ್ತೀಚೆಗೆ ಪತ್ನಿಯ ನಡತೆ ಬಗ್ಗೆ ಅನುಮಾನಗೊಂಡ ರವಿ ಆಗಾಗ್ಗೆ ಆಕೆಯೊಂದಿಗೆ ಗಲಾಟೆ ಮಾಡಿಕೊಂಡು ಪೆÇಲೀಸ್ ಠಾಣೆಗೂ ದೂರು ನೀಡಿ, ತೀರ್ಮಾನ ಮಾಡಿಕೊಂಡು ಬಂದಿದ್ದರು.
ಸೌಮ್ಯ ತನ್ನ ಕೆಟ್ಟ ಚಾಳಿಯನ್ನು ಬಿಟ್ಟಿಲ್ಲ ಎಂದು ಆರೋಪಿಸಿ ಶನಿವಾರ ರಾತ್ರಿ ಮನೆಯಲ್ಲಿ ಆಕೆ ನಿದ್ರೆ ಮಾಡುವಾಗ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಎನ್ನಲಾಗಿದೆ.
ಭಾನುವಾರ ವಿಷಯ ತಿಳಿದ ಪೆÇಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು.
ಮೃತಳ ಅಣ್ಣ ಮಹೇಶ್, ತಂಗಿ ಸಾವಿನ ಕುರಿತು ಹುಣಸೂರು ಪೆÇಲೀಸ್ ಠಾಣೆಯಲ್ಲಿ ಆಕೆಯ ಪತಿಯೇ ಕೊಲೆ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ರಂಗನಾಥ ಬಡಾವಣೆಯಲ್ಲಿ ಆರೋಪಿ ರವಿಯನ್ನು ಬಂಧಿಸಿದ್ದಾರೆ.