ಮೈಸೂರು: ಕೋವಿಡ್ ಲಸಿಕೆ ಕಾರ್ಯಕ್ರಮವು ದೇಶದಲ್ಲೆ ಅತಿ ದೊಡ್ಡ ನಿಯೋಜನೆಯಾಗಿ ಪ್ರಾರಂಭವಾಗಿದ್ದು, ಈ ರೋಗನಿರೋಧಕ ಲಸಿಕೆಯನ್ನು ಸೋಮವಾರ ರೈಲ್ವೆ ಆಸ್ಪತ್ರೆಯ ಮುಂಚೂಣಿ ಸಿಬ್ಬಂದಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯದೊಂದಿಗೆ ಮೈಸೂರು ರೈಲ್ವೆ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಯಿತು.
ಮೈಸೂರಿನ ನೈಋತ್ಯ ರೈಲ್ವೆ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಜಿ.ಎಸ್.ರಾಮಚಂದ್ರ ರವರು ಲಸಿಕೆಯನ್ನು ಪಡೆದ ಮೊದಲಿಗರಾಗಿದ್ದರು.
ಮೈಸೂರು ವಿಭಾಗವು ನೈಋತ್ಯ ರೈಲ್ವೆಯಲ್ಲಿಯೆ ಲಸಿಕೆ ಹಾಕಿದ ಮೊದಲ ರೈಲ್ವೆ ವಿಭಾಗವಾಯಿತು.
ಮೈಸೂರಿನಲ್ಲಿ 174 ಆರೋಗ್ಯ ಕಾರ್ಯಕರ್ತರು ಲಸಿಕೆಯ ಮೊದಲ ಪ್ರಮಾಣವನ್ನು ಪಡೆದರು.
ಆರೋಗ್ಯ ಕಾರ್ಯಕರ್ತರಲ್ಲದೆ, ಪ್ರಯಾಣಿಕ ರೈಲುಗಳ ಗಾರ್ಡ್‍ಗಳು, ಲೊಕೊ ಪೈಲಟ್‍ಗಳು, ಟಿಕೆಟ್ ತಪಾಸಣೆಯ ಪ್ರಯಾಣ ಸಿಬ್ಬಂದಿಗಳು, ಬುಕಿಂಗ್ ಕೌಂಟರ್, ಹೌಸ್ ಕೀಪಿಂಗ್ ಸಿಬ್ಬಂದಿ, ಸಹಾಯಕರು, ರೈಲ್ವೆ ಸಂರಕ್ಷಣ ದಳದ ಸಿಬ್ಬಂದಿ ಮತ್ತು ಇತರ ಆನ್‍ಬೋರ್ಡ್ ಸಿಬ್ಬಂದಿಗಳನ್ನು ಒಳಗೊಂಡ ವಿಭಾಗದ ಇತರೆ ಕಾರ್ಯಪಡೆ ಸಿಬ್ಬಂದಿಗಳನ್ನು ಮುಂಚೂಣಿ ಕೆಲಸಗಾರರೆಂದು ಪರಿಗಣಿಸಲಾಗುತ್ತದೆ ಮತ್ತು ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ಮೈಸೂರು ವಿಭಾಗದ ನೈಋತ್ಯ ರೈಲ್ವೆಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಗರ್ವಾಲ್ ರವರು ತಿಳಿಸಿದರು.
ರೇಲ್ವೆಯ ಮುಂಚೂಣಿ ಸಿಬ್ಬಂದಿಗೆ ರೋಗನಿರೋಧಕ ಶಕ್ತಿ ತುಂಬುವ ಅದ್ಭುತ ಕಾರ್ಯವನ್ನು ಶೀಘ್ರವಾಗಿ ನಿರ್ವಹಿಸುತ್ತಿರುವ ರೈಲ್ವೆ ಆಸ್ಪತ್ರೆ ಅಧಿಕಾರಿಗಳನ್ನು ರಾಹುಲ್ ಅಗರ್ವಾಲ್ ರವರು ಅಭಿನಂದಿಸಿದರು.