ಮೈಸೂರು: ಒಂದು ಬಾರಿ ನಗರವನ್ನು ಸ್ವಚ್ಛಗೊಳಿಸಿ, ನಿಗದಿತ ಪ್ರದೇಶವಲ್ಲದೆ, ಬೇರೆ ಕಡೆ ಅವೈಜ್ಞಾನಿಕವಾಗಿ ತ್ಯಾಜ್ಯ ಸುರಿಯುವ ಲಾರಿಗಳನ್ನು ಜಪ್ತಿ ಮಾಡಿ ಲಾರಿ ಮಾಲೀಕರನ್ನು ಜೈಲಿಗೆ ಕಳುಹಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸೂಚನೆ ನೀಡಿದರು.
ಮೈಸೂರು ನಗರದ ರಿಂಗ್ ರಸ್ತೆಗೆ ಸಂಬಂಧಪಟ್ಟಂತೆ ಸ್ವಚ್ಛತೆ ಮತ್ತು ಡಬ್ರಿಸ್ ವಿಚಾರವಾಗಿ ಸೋಮವಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿ ಈ ಸೂಚನೆ ನೀಡಿದರು.
ಇದೊಂದು ನಿರ್ಲಕ್ಷ್ಯ ಮಾಡುವ ಸಮಸ್ಯೆ ಅಲ್ಲ. ಬೆಂಗಳೂರಿನಲ್ಲಿ ಇಂದಿಗೂ ಈ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಬೆಂಗಳೂರು ಆದಂತೆ ಮೈಸೂರು ಆಗುವುದು ಬೇಡ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಹೀಗಾಗಿ ಕಠಿಣ ಕಾನೂನು ನೀತಿಯನ್ನು ಜಾರಿಗೊಳಿಸಬೇಕು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಅವರಿಗೆ ಸೂಚನೆ ನೀಡಿದರು.
ಹೀಗೆ ಎಲ್ಲೆಂದರಲ್ಲಿ ಕಸ ಸುರಿಯುವ ಲಾರಿಗಳ ಮೇಲೆ ಬೆಂಗಳೂರಿನಲ್ಲಿ ದಂಡ ವಿಧಿಸುವ ಹಾಗೂ ಮಾಲೀಕರನ್ನು ಜೈಲಿಗೆ ಕಳುಹಿಸುವ ನೀತಿಯನ್ನು ಜಾರಿಗೆ ತಂದಿದ್ದರಿಂದ ಅಲ್ಲಿ ಈಗ ಇಂತಹ ಚಟುವಟಿಕೆಯಲ್ಲಿ ಇಳಿಮುಖವಾಗುತ್ತಿದೆ. ಇದಕ್ಕಾಗಿ ಭಯದ ವಾತಾವರಣ ನಿರ್ಮಾಣ ಮಾಡಲೇಬೇಕು. ಇದಕ್ಕೆ ಬೆಂಗಳೂರಿನ ನೀತಿಯೇ ಸರಿ. ಮೈಸೂರು ಪೆÇಲೀಸ್ ಆಯುಕ್ತರ ಸಹಕಾರವೂ ಇದಕ್ಕೆ ಬೇಕು. ಕಾನೂನಿನಲ್ಲಿ ಕೆಲವು ಬದಲಾವಣೆ ತರುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕು ಎಂದು ಸಚಿವರು ತಿಳಿಸಿದರು.
ಬೆಂಗಳೂರಿನಲ್ಲಿ ಒಂದೊಂದೇ ಕಡೆ ಸರಿಮಾಡಿಕೊಂಡು ಬರಲಾಗಿತ್ತಿದ್ದು, ಒಮ್ಮೆ ಕಸ ಹೊಯ್ದ ಮೇಲೆ ಟಾರ್ಪಲ್ ಹಾಕುವುದು, ರಾಸಾಯನಿಕ ಸಿಂಪಡಣೆ ಮಾಡುವುದು ಸೇರಿದಂತೆ ಯಾವುದೇ ರೀತಿಯ ದುರ್ವಾಸನೆ ಬರದಂತೆ ತಡೆಯಲಾಗುತ್ತಿದೆ. ಹೀಗಾಗಿ ಈಗಲೇ ಎಚ್ಚೆತ್ತುಕೊಳ್ಳೋಣ. ಮೈಸೂರಿನಲ್ಲಿಯೂ ಇಂತಹ ಪ್ರಯತ್ನ ಮಾಡಿ ತ್ಯಾಜ್ಯ ಮುಕ್ತ ಮಾಡೋಣ ಎಂದು ಸೋಮಶೇಖರ್ ತಿಳಿಸಿದರು.
ಡಬ್ರೀಸ್ ಫ್ಯಾಕ್ಟರಿಗಳು ಎಲ್ಲಿಲ್ಲಿ ಇವೆಯೋ ಅಲ್ಲಲ್ಲಿ ಸುತ್ತಮುತ್ತ ತಂಡವನ್ನು ನಿಯೋಜಿಸಿ ಅಕ್ರಮವಾಗಿ ತ್ಯಾಜ್ಯ ಸುರಿಯುತ್ತಿರುವವರನ್ನು ಗುರುತಿಸಬೇಕು. ಇದಕ್ಕೆ ಪೆÇಲೀಸ್ ಇಲಾಖೆ, ಮುಡಾ, ಕಾಪೆರ್Çೀರೇಶನ್ ಸೇರಿ ಹಲವು ಇಲಾಖೆಗಳ ತಂಡವನ್ನು ರಚನೆ ಮಾಡಿ ನಿಯೋಜಿಸಬೇಕು ಎಂದು ಸಚಿವ ಸೋಮಶೇಖರ್ ಸೂಚನೆ ನೀಡಿದರು.
ಸಂಸದ ಪ್ರತಾಪ್ ಸಿಂಹ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಶಾಸಕರಾದ ಎಲ್.ನಾಗೇದ್ರ, ತನ್ವೀರ್ ಸೇಠ್, ಮುಡಾ ಆಯುಕ್ತ ನಟೇಶ್, ಕಾಪೆರ್Çೀರೇಶನ್ ಆಯುಕ್ತರಾದ ಗುರುದತ್ತ ಹೆಗಡೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.