ಇಂಜಿನಿಯರ್ ಮೇಲೆ ಮಾರಾಣಾಂತಿಕ ಹಲ್ಲೆ

ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ
ಚಾಮರಾಜನಗರ: ಕ್ಷುಲಕ ಕಾರಣಕ್ಕಾಗಿ ಇಂಜಿನಿಯರ್ ಲೈನ್ ಮ್ಯಾನ್ ನಡುವೆ ಜಗಳ ನಡೆದ ಪರಿಣಾಮ ಮಾರಣಾಂತಿಕ ಹಲ್ಲೆ ನಡೆಸಿ ಲೈನ್ ಮ್ಯಾನ್ ಠಾಣೆಗೆ ಹೋಗಿ ಶರಣಾದ ಘಟನೆ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ನಡೆದಿದೆ.
ಸೆಸ್ಕಾಂ ಇಂಜಿನಿಯರ್ ಚಂದ್ರಶೇರ್ ನಾಯಕ್ ಲೈನ್ ಮ್ಯಾನ್ ಮಹದೇವಸ್ವಾಮಿ ನಡುವೆ ಜಗಳ ನಡೆದಿದ್ದು. ಮಾರಕಾಸ್ತ್ರದಿಂದ ಇಂಜಿನಿಯರ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದ್ದು ಠಾಣೆಗೆ ಹೋಗಿ ಶರಣಾಗಿದ್ದಾನೆ.
ಹಲ್ಲೆಗೊಳಗಾದ ಇಂಜಿನಿಯರ್ ಜಿಲ್ಲಾ ಆಸ್ಪತ್ರೆಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ.
ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಮಾನತ್ತು: ಇಂಜಿನಿಯರ್ ಚಂದ್ರಶೇರ್ ನಾಯಕ್ ಮೇಲೆ ಹಲ್ಲೆ ನಡೆಸಿರುವ ಲೈನ್ ಮ್ಯಾನ್ ಮಹದೇವಸ್ವಾಮಿ ಅವರನ್ನು ಅಮಾನತ್ತು ಮಾಡಿ ಸೆಸ್ಕಾಂನ ಚಾಮರಾಜನಗರ ವಿಭಾಗದ ಕಾರ್ಯನಿವಾಹಕ ಇಂಜಿನಿಯರ್ ಅವರು ಆದೇಶ ಹೊರಡಿಸಿದ್ದಾರೆ.