ಮೈಸೂರು: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಮುಂದಿನ ಚುನಾವಣೆಗೆ ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು, ಕರ್ನಾಟಕ ರಾಜ್ಯದ ಗಡಿ ವಿಚಾರವಾಗಿ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ಎಂದು ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ತಿಳಿಸಿದರು.
ನಗರದಲ್ಲಿ ಶುಕ್ರವಾರ ಮಹಾರಾಷ್ಟ್ರ ಸಿಎಂ ವಿರುದ್ಧ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟಿಸಿ ತೇಜೇಶ್ ಲೋಕೇಶ್ ಗೌಡ ಮಾತನಾಡಿದರು.
ಮಹಾರಾಷ್ಟ್ರದಲ್ಲಿ ಠಾಕ್ರೆ ಜನರಿಂದ ತಿರಸ್ಕಾರಗೊಳ್ಳುತ್ತಿದ್ದಾರೆ, ಆದ್ದರಿಂದ ಜನರ ಗಮನ ಬೇರೆಡೆ ಸೆಳೆಯಲು ಗಡಿ ವಿಚಾರ ಎತ್ತುತ್ತಿದ್ದಾರೆಂದರು.
ಮಹಾಜನ್ ವರದಿ ಪ್ರಕಾರ ಬೆಳಗಾವಿ ನಮ್ಮ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ ಎಂದವರು ತಿಳಿಸಿದರು.
ಗಡಿಭಾಗದಲ್ಲಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಶಿವಸೇನೆ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿ ಸಂಘಟನೆಗಳನ್ನು ಕೇಂದ್ರ ಸರ್ಕಾರ ಕೂಡಲೇ ನಿಷೇಧಿಸಬೇಕು ಎಂದು ಅವರು ಒತ್ತಾಯಿಸಿದರು.
ಕನ್ನಡದ ಪ್ರದೇಶಗಳಾದ ಸೊಲ್ಲಾಪುರ, ಸಾಂಗ್ಲಿ ಮತ್ತು ಮುಂಬೈ ನಗರದ ಕೆಲವು ಭಾಗಗಳು ಕರ್ನಾಟಕ ರಾಜ್ಯಕ್ಕೆ ಸೇರಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು
ಪ್ರತಿಭಟನೆಯಲ್ಲಿ ಡಾ ಶಾಂತರಾಜೇಅರಸ್, ಪ್ರಭುಶಂಕರ್, ಕುಮಾರ್ ಗೌಡ, ಶಾಂತಮೂರ್ತಿ, ಪ್ರಜೀಶ್, ಡಾ. ಪುಷ್ಪಾ ಶಂಭುಕುಮಾರ್, ಸ್ವಾಮಿ, ವಿಜಯೇಂದ್ರ, ಸುಬ್ಬೇಗೌಡ, ನಂದಕುಮಾರ್, ಮಿನಿ ಬಂಗಾರಪ್ಪ, ರಾಧಾಕೃಷ್ಣ, ಪರಿಸರ ಚಂದ್ರು, ನಾರಾಯಣಗೌಡ, ದರ್ಶನ್ ಗೌಡ, ವಿನೋದ, ಗೊರೂರುಮಲ್ಲೇಶ್, ಸುಂದರಪ್ಪ, ಬಸವರಾಜು, ಕಲೀಂ, ಹರೀಶ್ ಅಂಕಿತ, ನಾಜೀರ್, ದೂರ ಸುರೇಶ್, ಕೃಷ್ಣ, ಇನ್ನೂ ಇತರರು ಉಪಸ್ಥಿತರಿದ್ದರು.