ದಸರಾ ವಸ್ತು ಪ್ರದರ್ಶನಕ್ಕೆ ಆಧುನಿಕ ಯೋಜನೆ ಮೂಲಕ ಪ್ರವಾಸಿಗರನ್ನು ಆಕರ್ಷಿಸಲಾಗುವುದು -ಹೇಮಂತ್ ಕುಮಾರ್

ಮೈಸೂರು: ಆಧುನಿಕ ಯೋಜನೆ ಮೂಲಕ ಪ್ರವಾಸಿಗರನ್ನು ದಸರಾ ವಸ್ತು ಪ್ರದರ್ಶನಕ್ಕೆ ಆಕರ್ಷಿಸಲಾಗುವುದು ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ಹೇಳಿದರು.
ನಗರದಲ್ಲಿನ ದೊಡ್ಡಕೆರೆ ಮೈದಾನದಲ್ಲಿರುವ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ಮಳಿಗೆಗಳ ಉತ್ತಮ ಆಯೋಜನೆ ಗುರುತಿಸಿ ಆಯೋಜಕರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಈ ಬಾರಿ ಬೇಸಿಗೆ ದಸರಾ ವಸ್ತು ಪ್ರದರ್ಶನವನ್ನು ಆಧುನಿಕ ಯೋಜನೆಗಳ ಮೂಲಕ ಪ್ರವಾಸೋದ್ಯಮ ಇಲಾಖೆಯೊಂದಿಗೆ ಚರ್ಚಿಸಿ ಪ್ರವಾಸಿಗರನ್ನು ಆಕರ್ಷಿಸಲಾಗುವುದೆಂದರು.
ಇAದಿನ ಮಾಲ್ ಸಂಪ್ರದಾಯ ಆನಲೈನ್ ಜಾಗತಿಕ ಮಾರುಕಟ್ಟೆಗಳಿದ್ದರೂ ಸಹ ಕರ್ನಾಟಕ ವಸ್ತುಪ್ರದರ್ಶನಕ್ಕೆ ತನ್ನದೇ ಆದ ಮಾನ್ಯತೆ ಆಯಾಮವಿದೆ. ಇನ್ನಷ್ಟು ಅಭಿವೃದ್ಧಿಪಡಿಸಿ ಆಧುನಿಕ ಪಡಿಸಲಾಗುವುದು ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಸವಲತ್ತು ಜನಸಾಮನ್ಯರಿಗೆ ತಲುಪಿಸಲು ವಸ್ತುಪ್ರದರ್ಶನ ಆವರಣದಲ್ಲಿ ಸರ್ಕಾರಿ ಮಳಿಗೆಗೆಳು ಪರಿಣಾಮಕರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದವರು ತಿಳಿಸಿದರು.
ಬೇಸಿಗೆ ವಸ್ತುಪ್ರದರ್ಶನ ನಡೆಯುವ ಸಂಧರ್ಭದಲ್ಲಿ ಎಲ್ಲಾ ಇಲಾಖೆಗಳ ಮಳಿಗೆಗಳು ಭಾಗವಹಿಸಿದರೆ ಕಟ್ಟಕಡೆಯ ವ್ಯಕ್ತಿಗೆ ಸಂಬAಧಪಟ್ಟ ಯೋಜನೆಗಳ ಮಾಹಿತಿ ಜಾಗೃತಿ ಮೂಡಿಸಬಹುದು ಇದಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಕರ್ನಾಟಕ ವಸ್ತುಪ್ರದರ್ಶನ ಸಹಕಾರ ನೀಡಲಿದೆ ಎಂದು ಅವರು ಹೇಳಿದರು.
ದಸರಾ ವಸ್ತಪ್ರದರ್ಶನಕ್ಕೆ ಆಗಮಿಸುವ ಪ್ರವಾಸಿಗರಿಗೆ ಕೇವಲ ಮನರಂಜನೆಯಷ್ಟೆ ಅಲ್ಲದೇ ಜ್ಞಾನ ಸಂಪಾದನೆ ಜೊತೆಯಲ್ಲೆ ಸರ್ಕಾರಿ ಸವಲತ್ತುಗಳ ಮಾಹಿತಿಯ ಜಾಗೃತಿ ಮೂಡಿಸಲು ಸರ್ಕಾರ ವಿವಿಧ ಇಲಾಖೆಗಳ ಮಳಿಗೆಗಳು ೨೦೧೯ರಲ್ಲಿ ಭಾಗವಹಿಸಿದ್ದ ಹಿನ್ನಲೆಯಲ್ಲಿ ಆಯ್ದ ಮಳಿಗೆಗಳ ಆಯೋಜನೆ ಪ್ರದರ್ಶನವನ್ನು ಗುರುತಿಸಿ ಬಹುಮಾನಗಳನ್ನು ನೀಡಲಾಯಿತು.
ಸಿ.ಇ.ಓ. ಬಿ. ಆರ್. ಗಿರೀಶ್, ಎ.ಇ.ಇ. ಎಂ. ಎನ್. ಯಾದವಗಿರಿ, ಪ್ರಕಾಶ್, ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.